ರಜನೀಕಾಂತ್ ಹಾದಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ
ಹೀಗಾಗಿ ನಿರ್ಮಾಪಕರೂ ಕೋಟಿ ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡುತ್ತಾರೆ. ಒಂದು ವೇಳೆ ಸೋತರೂ ಅವರು ನಿರ್ಮಾಪಕರನ್ನು ಕೈ ಬಿಡಲ್ಲ. ನಿರ್ಮಾಪಕರಿಗೆ ಎಷ್ಟೋ ಬಾರಿ ರಜನಿ ನಷ್ಟ ಭರ್ತಿ ಮಾಡಿಕೊಟ್ಟಿದ್ದಾರೆ.
ಇದೀಗ ಮೆಗಾಸ್ಟಾರ್ ಚಿರಂಜೀವಿ ಕೂಡಾ ಅದೇ ಹಾದಿಯಲ್ಲಿದ್ದಾರೆ. ಆಚಾರ್ಯ ಸಿನಿಮಾ ಸೋಲು ವಿತರಕರಿಗೆ ಭಾರೀ ನಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ವಿತರಕರು ನಷ್ಟ ಭರ್ತಿ ಮಾಡಿಕೊಡಲು ಚಿರಂಜೀವಿ ಮತ್ತು ರಾಮ್ ಚರಣ್ ಗೆ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆಯನ್ನು ಈಡೇರಿಸಿರುವ ಚಿರಂಜೀವಿ ವಿತರಕರಿಗೆ 20 ಕೋಟಿ ರೂ. ನಷ್ಟ ಭರ್ತಿ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.