ಜೇಮ್ಸ್ ಪ್ರಿರಿಲೀಸ್ ಈವೆಂಟ್ ಗೆ ಮೆಗಾಸ್ಟಾರ್ ಚಿರಂಜೀವಿ ಅತಿಥಿ?

ಶನಿವಾರ, 26 ಫೆಬ್ರವರಿ 2022 (09:25 IST)
ಹೈದರಾಬಾದ್: ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ ನ್ನು ಚಿತ್ರತಂಡ ಭರ್ಜರಿಯಾಗಿ ಆಯೋಜಿಸಲಿದೆ.

ಮೂಲಗಳ ಪ್ರಕಾರ ಜೇಮ್ಸ್ ಪ್ರಿರಿಲೀಸ್ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆಯಂತೆ. ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಚಿತ್ರತಂಡ ಮಾರ್ಚ್ 17 ರಂದು ಪುನೀತ್ ಬರ್ತ್ ಡೇಗೆ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪುನೀತ್ ಕೊನೆಯ ಸಿನಿಮಾ ಇದಾಗಿರುವುದರಿಂದ ಅದನ್ನು ವಿಶೇಷವಾಗಿಸಲು ಚಿತ್ರತಂಡ ಎಲ್ಲಾ ಪ್ರಯತ್ನ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ