ಮೇಘಾ ಶೆಟ್ಟಿ-ಧನ್ವೀರ್ ರೊಮ್ಯಾಂಟಿಕ್ ಹಾಡು ಇಂದು ರಿಲೀಸ್
ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಧನ್ವೀರ್ ಆಕ್ಷನ್ ಗೆ ಫ್ಯಾನ್ಸ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡಕ್ಕೆ ಮತ್ತೊಬ್ಬ ಆಕ್ಷನ್ ಹೀರೋ ಸಿಕ್ಕಿದ್ದಾರೆ ಎಂದುಕೊಳ್ಳುತ್ತಿದ್ದಾರೆ.
ಇದರ ಜೊತೆಗೆ ಟೀಸರ್ ನಲ್ಲಿ ನಾಯಕಿ ಮೇಘಾ ಮತ್ತು ಧನ್ವೀರ್ ನಡುವೆ ರೊಮ್ಯಾಂಟಿಕ್ ಸನ್ನಿವೇಶದ ತುಣುಕೊಂದು ಬರುತ್ತದೆ. ಇದನ್ನು ನೋಡಿದ ಮೇಲಂತೂ ಜನ ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಹೇಗಿರಬಹುದು ಎಂದು ನೋಡಲು ಕಾತುರರಾಗಿದ್ದಾರೆ. ಅದರ ನಡುವೆಯೇ ಚಿತ್ರತಂಡ ಇಂದು ಸಂಜೆ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಲಿದೆ. ಈ ಹಾಡಿನ ಬಗ್ಗೆ ಕುತೂಹಲ ಶುರುವಾಗಿದೆ.