ಡಿ ಬಾಸ್ ನೋಡಕ್ಕೆ ಹೋಗಿಲ್ವಾ: ಸೋಷಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿಗೆ ನೆಟ್ಟಿಗರ ಪ್ರಶ್ನೆ

Krishnaveni K

ಗುರುವಾರ, 11 ಜುಲೈ 2024 (12:09 IST)
Photo Credit: Instagram
ಬೆಂಗಳೂರು: ನಟ ದರ್ಶನ್-ಪವಿತ್ರಾ ಗೌಡ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟಿ ಮೇಘಾ ಶೆಟ್ಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದರೂ ಟ್ರೋಲ್ ಆಗುತ್ತಿದ್ದಾರೆ.

ನಟಿ ಮೇಘಾ ಶೆಟ್ಟಿ ಇತ್ತೀಚೆಗೆ ಮಾಡಿಕೊಂಡಿದ್ದ ತಮ್ಮ ಫೋಟೋ ಶೂಟ್ ನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಪ್ಪು ಸೀರೆ ಉಟ್ಟು ಗ್ಲಾಮರಸ್ ಆಗಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಶೂಟ್ ನ ಫೋಟೋಗಳನ್ನೂ ಹಂಚಿಕೊಂಡಿದ್ದರು.

ಆದರೆ ಅವರ ಈ ಫೋಟೋಗಳಿಗೆ ಲೈಕ್ಸ್ ಜೊತೆಗೆ ಡಿ ಬಾಸ್ ಹೆಸರೆತ್ತಿ ಕೆಲವರು ಕಾಲೆಳೆದಿದ್ದಾರೆ. ನಿಮ್ಮ ಬಾಸ್ ನೋಡಕ್ಕೆ ಜೈಲಿಗೆ ಹೋಗಿಲ್ವಾ ಮೇಡಂ ಎಂದು ಕೆಲವರು ಕಾಲೆಳೆದಿದ್ದರೆ ಮತ್ತೆ ಕೆಲವರು ಮೊದಲು ಜೈಲಿನಲ್ಲಿರುವ ಬಾಸ್ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಮೆಘಾ ಶೆಟ್ಟಿ ಈಗ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಕೆಲವು ಸಮಯದ ಹಿಂದೆ ಪವಿತ್ರಾ ಗೌಡ ಆಯೋಜಿಸಿದ್ದ ದರ್ಶನ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮೇಘಾ ಆ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ದರ್ಶನ್ ಪತ್ನಿವಿಜಯಲಕ್ಷ್ಮಿ ಕೆಂಗಣ್ಣಿಗೆ ಗುರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ