ರಾಯನ್ ರಾಜ್ ಸರ್ಜಾ ಭರ್ಜರಿ ಬರ್ತ್ ಡೇ ಪಾರ್ಟಿ

ಶುಕ್ರವಾರ, 22 ಅಕ್ಟೋಬರ್ 2021 (17:04 IST)
ಬೆಂಗಳೂರು: ಚಿರು ಸರ್ಜಾ-ಮೇಘನಾ ದಂಪತಿ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು ಒಂದು ವರ್ಷ ತುಂಬಿದ ಸಂಭ್ರಮ. ಮಗನ ಮೊದಲ ಹುಟ್ಟುಹಬ್ಬವನ್ನು ಮೇಘನಾ ರಾಜ್ ಭರ್ಜರಿಯಾಗಿ ಆಚರಿಸಿದ್ದಾರೆ.


ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಆಯೋಜಿಸಿದ ಮೇಘನಾ ರಾಯನ್ ಬರ್ತ್ ಡೇಯನ್ನು ವಿಶೇಷವಾಗಿ ಆಚರಿಸಿದ್ದಾರೆ. ವಿಶೇಷವಾಗಿ ಕಾಡಿನ ಸೆಟ್ ಹಾಕಿ ರಾಯನ್ ಬರ್ತ್ ಡೇ ಆಚರಿಸಲಾಗಿದೆ.

ಇನ್ನು, ರಾಯನ್ ಗೆ ಶುಭ ಕೋರಲು ಮೇಘನಾ-ಚಿರು ಸ್ನೇಹಿತರು, ಸ್ಯಾಂಡಲ್ ವುಡ್ ಸ್ನೇಹಿತರು ಆಗಮಿಸಿದ್ದರು. ಈ ಫೋಟೋಗಳನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ