ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನಾಮಕರಣ: ಸ್ಪಷ್ಟನೆ ಕೊಟ್ಟ ಮೇಘನಾ ರಾಜ್

ಭಾನುವಾರ, 5 ಸೆಪ್ಟಂಬರ್ 2021 (09:13 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾಗೆ ಇತ್ತೀಚೆಗೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳಲ್ಲಿ ನಾಮಕರಣ ಮಾಡಲಾಗಿತ್ತು. ಈ ವಿಚಾರವಾಗಿ ಸರ್ಜಾ ಕುಟುಂಬ ಮತ್ತು ಮೇಘನಾ ರಾಜ್ ಕುಟುಂಬ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿತ್ತು. ಅದಕ್ಕೀಗ ಮೇಘನಾ ಸಾಮಾಜಿಕ ಜಾಲತಾಣ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.


ಸರ್ಜಾ ಕುಟುಂಬ ಅಪ್ಪಟ ಆಂಜನೇಯ ಭಕ್ತರು. ಗಂಡನ ಮನೆಯವರು ಹಿಂದೂಗಳಾಗಿದ್ದುಕೊಂಡು ಮಗನಿಗೆ ಮೇಘನಾ ಕ್ರಿಶ್ಚಿಯನ್ ಸಂಪ್ರದಾಯದಂತೆ ನಾಮಕರಣ ಮಾಡಿದ್ದು ಯಾಕೆ? ಮಗನಿಗೆ ಕ್ರಿಶ್ಚಿನಯ್ ಹೆಸರಿಟ್ಟಿದ್ದೇಕೆ? ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು.

ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಮೇಘನಾ ರಾಯನ್ ಹೆಸರು ಯಾವುದೇ ಧರ್ಮಕ್ಕೆ ಸೇರಿದ್ದಲ್ಲ. ಇದಕ್ಕೆ ಎಲ್ಲಾ ಧರ್ಮ, ಭಾಷೆಗಳಲ್ಲೂ ಯುವರಾಜ ಎಂಬ ಅರ್ಥವಿದೆ. ಇನ್ನು, ನಾನಾಗಲೀ, ಚಿರು ಆಗಲೀ ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂದು ನಂಬಿದ್ದೇವೆ. ಒಬ್ಬ ಅಮ್ಮನಾಗಿ ನನ್ನ ಮಗನಿಗೆ ಯಾವುದು ಒಳಿತೋ ಅದನ್ನು ಮಾಡಿದ್ದೇನೆ. ನಮಗಾಗಿ ಜಾತಿ, ಮತ ಬೇಧವಿಲ್ಲದೇ ಜನ ಪ್ರಾರ್ಥಿಸಿದ್ದಾರೆ. ಹೀಗಾಗಿ ಎರಡೂ ಧರ್ಮದ ಪ್ರಕಾರ ನಾಮಕರಣ ಮಾಡುವುದು ನಮಗೆ ಮುಖ್ಯವಾಗಿತ್ತು’ ಎಂದು ಮೇಘನಾ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ