ಜ್ಯೂನಿಯರ್ ಚಿರು ಬಗ್ಗೆ ಸುಳ್ಳು ವಿಡಿಯೋ ಹಾಕಿದವರ ಬಗ್ಗೆ ಮೇಘನಾ ಪ್ರತಿಕ್ರಿಯೆ

ಬುಧವಾರ, 16 ಡಿಸೆಂಬರ್ 2020 (09:30 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ಪುತ್ರ ಜ್ಯೂನಿಯರ್ ಚಿರು ಬಗ್ಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ, ಯೂ ಟ್ಯೂಬ್ ಗಳಲ್ಲಿ ನಕಲಿ ಫೋಟೋಗಳು, ವಿಡಿಯೋಗಳು ಹರಿದಾಡುತ್ತಲೇ ಇವೆ.


ಅಸಲಿಗೆ ಮೇಘನಾ ಮತ್ತು ಕುಟುಂಬಸ್ಥರು ಎಲ್ಲೂ ಜ್ಯೂನಿಯರ್ ಚಿರು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿಲ್ಲ. ಹಾಗಿದ್ದರೂ ಕೆಲವು ಜಾಲತಾಣಗಳಲ್ಲಿ ಇದು ಜ್ಯೂನಿಯರ್ ಚಿರು ಎಂದು ವಿಡಿಯೋ ಹರಿದಾಡುತ್ತಿರುವ ಬಗ್ಗೆ ಮೇಘನಾ ಪ್ರತಿಕ್ರಿಯಿಸಿದ್ದಾರೆ. ನಕಲಿ ವಿಡಿಯೋವೊಂದನ್ನು ಕುರಿತಾಗಿ ಮೇಘನಾ ಪ್ರತಿಕ್ರಿಯಿಸಿದ್ದು, ಈ ವಿಡಿಯೋದಲ್ಲಿರುವ ಮಗು ಕ್ಯೂಟ್ ಆಗಿದೆ. ಆದರೆ ಇದು ಜ್ಯೂನಿಯರ್ ಚಿರು ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ