ರಾಯನ್ ಅಮ್ಮನಿಗಿಂತ ಅಪ್ಪ ಅಂತಾನೇ ಕರೆಯೋದು: ಮೇಘನಾ ರಾಜ್

ಶನಿವಾರ, 8 ಜನವರಿ 2022 (11:23 IST)
ಬೆಂಗಳೂರು: ಚಿರಂಜೀವಿ ಸರ್ಜಾ ಸಾವಿನ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದಿರುವ ನಟಿ ಮೇಘನಾ ರಾಜ್ ಇದೀಗ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ವೇದಿಕೆ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಬಂದಿರುವ ಮೇಘನಾ, ಈ ನಡುವೆ ಚಿರು ಮತ್ತು ಪುತ್ರ ರಾಯನ್ ನೆನೆದು ಭಾವುಕರಾಗಿ ಮಾತನಾಡಿದ್ದಾರೆ.

‘ನನ್ನ ಮಗ ಯಾವತ್ತೂ ಅಮ್ಮ ಅಂತ ಹೇಳಿಕೊಟ್ಟರೂ ಅಪ್ಪ ಅಂತಾನೇ ಹೇಳೋದು. ಚಿರು ಅಂದರೆ ಸಂತೋಷ. ನಿನ್ನೆ ಮತ್ತು ನಾಳೆ ಬಗ್ಗೆ ಯೋಚಿಸದೇ ಈವತ್ತು ಖುಷಿಯಾಗಿರೋದು ಮುಖ್ಯ ಎಂದು ನಂಬಿದ್ದ. ನಾನೂ ಅದನ್ನೇ ಫಾಲೋ ಮಾಡ್ತೀನಿ. ನಾನು ಅಳಲ್ಲ’ ಎನ್ನುತ್ತಲೇ ಮೇಘನಾ ಭಾವುಕರಾಗುತ್ತಾರೆ. ಈ ಕಾರ್ಯಕ್ರಮ ಇಂದು ಮತ್ತು ನಾಳೆ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ