ಅಪ್ಪಂದಿರ ದಿನಕ್ಕೆ ಜ್ಯೂನಿಯರ್ ಚಿರು ಮಾಡಿದ ಕೆಲಸ ನೋಡಿ ನೆಟ್ಟಿಗರಿಗೆ ನಗುವೋ ನಗು!

ಭಾನುವಾರ, 20 ಜೂನ್ 2021 (10:58 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರು ಮಾಡಿದ ಕೆಲಸವೊಂದನ್ನು ನೋಡಿ ನೆಟ್ಟಿಗರ ಮೊಗದಲ್ಲಿ ನಗು ಮೂಡಿದೆ.


ನಿನ್ನೆ ಮೇಘನಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಜ್ಯೂನಿಯರ್ ಚಿರು ಲ್ಯಾಪ್ ಟಾಪ್ ಮುಂದೆ ಕೂತು ತದೇಕಚಿತ್ತದಿಂದ ವೀಕ್ಷಣೆ ಮಾಡುವ ವಿಡಿಯೋವನ್ನು ಪ್ರಕಟಿಸಿದ್ದರು. ಅದಾದ ಬಳಿಕ ಇದರ ಪೂರ್ತಿ ವಿಡಿಯೋ ಸ್ಪೆಷಲ್ ಆಗಿದ್ದು, ನಾಳೆ ಪ್ರಕಟಿಸುವುದಾಗಿ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದ್ದರು.

ಇಂದು ಅಪ್ಪಂದಿರ ದಿನಾಚರಣೆ ಪ್ರಯುಕ್ತ ಮೇಘನಾ ಈ ಸ್ಪೆಷಲ್ ವಿಡಿಯೋವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜ್ಯೂನಿಯರು ಚಿರು ಅಪ್ಪನ ಸಿನಿಮಾ ಹಾಡಿನ ವಿಡಿಯೋವನ್ನು ವೀಕ್ಷಿಸುತ್ತಿದ್ದಾನೆ. ಈ ಹಾಡನ್ನು ಅವನೇ ತನಗೇ ಗೊತ್ತಿಲ್ಲದಂತೇ ಪ್ಲೇ ಮಾಡಿದ್ದಾನೆ ಮತ್ತು ಮತ್ತೆ ಮತ್ತೆ ಅದೇ ಹಾಡನ್ನು ನೋಡುತ್ತಿದ್ದಾನೆ ಎಂದಿರುವ ಮೇಘನಾ ಅಪ್ಪಂದಿರ ದಿನಕ್ಕೆ ಶುಭಾಶಯ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ