ಚಿರಂಜೀವಿ ಸರ್ಜಾ ಅಗಲುವಿಕೆಗೆ ಒಂದು ವರ್ಷ: ಪತಿಯ ನೆನೆದ ಮೇಘನಾ

ಸೋಮವಾರ, 7 ಜೂನ್ 2021 (09:36 IST)
ಬೆಂಗಳೂರು: ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಿ ಇಂದಿಗೆ ಸರಿಯಾಗಿ ಒಂದು ವರ್ಷವಾಗಿದೆ. ಕಳೆದ ವರ್ಷ ಇದೇ ದಿನ ಚಿರು ಸರ್ಜಾ ಹೃದಯಾಘಾತದಿಂದ ನಿಧನರಾಗಿ ಎಲ್ಲರಿಗೂ ಶಾಕ್ ಉಂಟು ಮಾಡಿದ್ದರು.


ಚಿರು ಪುಣ್ಯ ಸ್ಮರಣೆಯ ದಿನವಾದ ಇಂದು ಅವರ ಸಮಾಧಿ ಇರುವ ತೋಟದ ಮನೆಗೆ ಕುಟುಂಬಸ್ಥರು ತೆರಳಿ ಪೂಜೆ ಸಲ್ಲಿಸುವ ಸಾಧ‍್ಯತೆಯಿದೆ.

ಇನ್ನು, ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಮೇಘನಾ ರಾಜ್, ಚಿರು ಸಹೋದರ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಂದೇಶ ಬರೆದುಕೊಂಡಿದ್ದಾರೆ. ನಿನ್ನ ಸ್ಮರಣೆಯಲ್ಲೇ ಇರುವ ಕುಟುಂಬಸ್ಥರು ಎಂದು ಇಬ್ಬರೂ ಕಾಮನ್ ಸಂದೇಶವನ್ನು ಶೇರ್ ಮಾಡಿಕೊಂಡಿದ್ದಾರೆ. ಇದಲ್ಲದೆ ಮೇಘನಾ ಚಿರು ಜೊತೆಗಿನ ಖುಷಿಯ ಕ್ಷಣವೊಂದರ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ನೀನು ಯಾವತ್ತಿಗೂ ನನ್ನವನು ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ