ಕ್ಯಾನ್ಸರ್‌ ಗೆದ್ದು ಬೆಂಗಳೂರಿಗೆ ಬರುತ್ತಿದ್ದಂತೆ ಶೂಟಿಂಗ್‌ ಬಗ್ಗೆ ಅ‍ಪ್‌ಡೇಟ್‌ ನೀಡಿದ ಶಿವಣ್ಣ

Sampriya

ಭಾನುವಾರ, 26 ಜನವರಿ 2025 (13:51 IST)
Photo Courtesy X
ಬೆಂಗಳೂರು: ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡ ನಂತರ ಬೆಂಗಳೂರಿಗೆ ಬಂದಿರುವ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಅವರು ಶೂಟಿಂಗ್‌ ಕುರಿತು ಅಪ್‌ಡೇಟ್‌ ನೀಡಿದ್ದಾರೆ.

ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿ ಬೆಂಗಳೂರಿಗೆ ಆಗಮಿಸಿದ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

ಅಮೆರಿಕಕ್ಕೆ ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ ಎಂದರು.  

ಫ್ಲೈಟ್‌ನಲ್ಲಿ 20 ಗಂಟೆಯಾಯಿತು. ಆರು ಗಂಟೆ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿಯವರು ಧೈರ್ಯ ತುಂಬಿದರು. ಗೀತನ ಬಗ್ಗೆ ಮಾತಾಡಲ್ಲ. ಗೀತಾ ಹೆಂಡತಿನೂ ಹೌದು, ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಅನು ಕೂಡಾ ಒಂದು ತಿಂಗಳು ನಮ್ಮ ಜೊತೆ ಇದ್ದರು ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ