ಮುಂಬೈ ಪವರ್ ಕಟ್ : ಮಹಾರಾಷ್ಟ್ರ ಸರಕಾರಕ್ಕೆ ನಟಿ ಕಂಗನಾ ರಣಾವತ್ ಟಾಂಗ್

ಸೋಮವಾರ, 12 ಅಕ್ಟೋಬರ್ 2020 (19:57 IST)
ಮಹಾರಾಷ್ಟ್ರ ಸರಕಾರದ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟ್ ಟಾಂಗ್  ಕೊಟ್ಟಿದ್ದಾರೆ.

ಮಹಾರಾಷ್ಟ್ರ ಸರ್ಕಾರದೊಂದಿಗೆ ಕಂಗನಾ ರನೌತ್ ಅವರ ಯುದ್ಧ ಮುಂದುವರೆದಿದೆ. ಮುಂಬೈ ನಗರವು ಅನಿರೀಕ್ಷಿತ ವಿದ್ಯುತ್ ಕಡಿತದಿಂದ ಹೋದ ಸಮಯದಲ್ಲಿ, ನಟಿ ಕಂಗನಾ ರಣಾವತ್ ಅವರು ಶಿವಸೇನಾ ಪಕ್ಷದ ಸಂಜಯ್ ರಾವತ್ ಅವರನ್ನು ಟೀಕಿಸಿದ್ದಾರೆ.

ರಾವತ್ ಮತ್ತು ಹಾಸ್ಯನಟ ಕುನಾಲ್ ಕಮ್ರಾ ಅವರ ಫೋಟೋವನ್ನು ಶೇರ್ ಮಾಡಿರುವ ಕಂಗನಾ, “# ಮುಂಬೈನಲ್ಲಿ ಪವರ್ ಕಟ್, ಅಷ್ಟರಲ್ಲಿ ಮಹಾರಾಷ್ಟ್ರ ಸರ್ಕಾರ क-क-क ....... कंगना।”ಎಂದು ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ