ಮದುವೆಯ ಮಧುರ ಕ್ಷಣಗಳ ಫೋಟೋ ಹಂಚಿಕೊಂಡ ನಾಗಾಚೈತನ್ಯ

Sampriya

ಸೋಮವಾರ, 9 ಡಿಸೆಂಬರ್ 2024 (16:01 IST)
Photo Courtesy X
ನಟಿ ಸಮಂತಾಗೆ ಡಿವೋರ್ಸ್ ನೀಡಿದ ವರ್ಷಗಳ ಬಳಿಕ ನಟಿ ಶೋಭಿತಾ ಧೂಳಿಪಾಲ ಅವರನ್ನು ನಟ ನಾಗಚೈತನ್ಯ ಅವರು ಈಚೆಗೆ ಅದ್ಧೂರಿಯಾಗಿ ಮದುವೆಯಾದರು. ತಮ್ಮ ವಿವಾಹ ಸಮಾರಂಭದ ಸಂಭ್ರಮದ ಕ್ಷಣಗಳನ್ನು ನಾಗಚೈತನ್ಯ ಹಾಗೂ ಶೋಭಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೊದಲ ಫೋಟೋದಲ್ಲಿ, ಶೋಭಿತಾ ಅವರು ನಾಗ ಚೈತನ್ಯ ಅವರ ಮುಖವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದರು. ಇಬ್ಬರೂ ಮುಗುಳ್ನಕ್ಕರು. ಕೆಲವು ಚಿತ್ರಗಳು ಇವರಿಬ್ಬರು ಧಾರ್ಮಿಕ ವಿಧಿಗಳನ್ನು ನಿರ್ವಹಿಸುತ್ತಿರುವುದನ್ನು ತೋರಿಸಿವೆ. ಒಂದು ಫೋಟೋದಲ್ಲಿ, ಚೈತನ್ಯ ಅವರ ಕುತ್ತಿಗೆಗೆ ಹಾರವನ್ನು ಹಾಕಲು ಪ್ರಯತ್ನಿಸಿದಾಗ ಶೋಭಿತಾ ಹಿಂದೆ ವಾಲುತ್ತಿರುವುದನ್ನು ಕಾಣಬಹುದು.

ಇಬ್ಬರ ಅಮೂಲ್ಯ ಕ್ಷಣಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಅವರು, ತೆಲುಗಿನಲ್ಲಿ ಶೀರ್ಷಿಕೆ ನೀಡಿದ್ದಾರೆ. "ಇದೊಂದು ಪವಿತ್ರ ದಾರ. ಇದು ನನ್ನ ದೀರ್ಘಾಯುಷ್ಯಕ್ಕೆ ಅತ್ಯಗತ್ಯ. ನಾನು ಇದನ್ನು ನಿಮ್ಮ ಕುತ್ತಿಗೆಗೆ ಕಟ್ಟುತ್ತೇನೆ, ಓ ಕನ್ಯೆ, ಅನೇಕ ಮಂಗಳಕರ ಗುಣಗಳನ್ನು ಹೊಂದಿರುವ ನೀವು ನೂರು ಕಾಲ ಸಂತೋಷದಿಂದ ಬದುಕುತ್ತೀರಿ ಎಂದರು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ