ಹೈದರಾಬಾದ್ : ನಟ ನಾಗಾರ್ಜುನ್ ಅವರು ಬುಧವಾರ ಕೋವಿಡ್ 19 ಲಸಿಕೆಯನ್ನು ಪಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 1 ರಂದು ಸರ್ಕಾರವು 60 ವರ್ಷದಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45ರಿಂದ 59 ವರ್ಷದೊಳಗಿನ ಅಸ್ವಸ್ಥರಿಗೆ ಸಹ ಲಸಿಕೆ ಹಾಕಲು ರಾಷ್ಟ್ರವ್ಯಾಪಿ ಸೂಚಿಸಿದೆ.
ಹಾಗಾಗಿ ಖ್ಯಾತ ನಟರಾದ ಮೋಹನ ಲಾಲ್ , ಜೀತೇಂದ್ರ, ಹೇಮಾ ಮಾಲಿನಿ ಮತ್ತು ಜಾನಿ ಲಿವರ್ ಲಸಿಕೆ ಹಾಕಿಸಿಕೊಂಡಿದ್ದರು. ಇದೀಗ 61ವರ್ಷದ ನಾಗಾರ್ಜುನ್ ಅವರು ಇಂದು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.