ಮಗ-ಸೊಸೆ ವಿಚ್ಛೇದನ: ಭಾವುಕರಾದ ನಾಗಾರ್ಜುನ
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ನಾಗಾರ್ಜುನ, ಭಾರವಾದ ಹೃದಯದಿಂದ ಇದನ್ನು ಹೇಳುತ್ತಿದ್ದೇನೆ. ಸ್ಯಾಮ್ ಮತ್ತು ಚೈ ನಡುವೆ ಆಗಿದ್ದು ದುರದೃಷ್ಟಕರ. ಗಂಡ-ಹೆಂಡತಿ ನಡುವೆ ನಡೆಯುವುದು ತೀರಾ ವೈಯಕ್ತಿಕ. ಸ್ಯಾಮ್ ಮತ್ತು ಚೈ ಇಬ್ಬರೂ ನನಗೆ ಪ್ರೀತಿ ಪಾತ್ರರು. ನನ್ನ ಕುಟುಂಬ ಯಾವತ್ತೂ ಸ್ಯಾಮ್ ಜೊತೆ ಕಳೆದ ಒಳ್ಳೆಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತದೆ ಮತ್ತು ಅವಳು ಯಾವತ್ತೂ ನಮಗೆ ಪ್ರೀತಿ ಪಾತ್ರಳಾಗಿಯೇ ಇರುತ್ತಾಳೆ. ಇಬ್ಬರಿಗೂ ಧೈರ್ಯಕೊಟ್ಟು ದೇವರು ಕಾಪಾಡಲಿ ಎಂದು ನಾಗಾರ್ಜುನ ಭಾವುಕರಾಗಿ ಸಂದೇಶ ಬರೆದಿದ್ದಾರೆ.