ಬೆಂಗಳೂರು: ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ, ನಟ ಪ್ರಥಮ್ ನಡುವೆ ಜಟಾಪಟಿ ಜೋರಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಈ ನಡುವೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಬಂದಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಮಾತ್ರ ತಮ್ಮ ಮಗಳ ಜತೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಮಗಳ ಜತೆಗಿನ ಮನೆಯಲ್ಲಿ ಟೈಮ್ ಪಾಸ್ ಮಾಡುತ್ತಿರುವ ಪೋಟೋವನ್ನು ಶೇರ್ ಮಾಡಿ, ಜಗತ್ತೇ ನನ್ನ ವಿರುದ್ಧ ನಿಂತಿದ್ದಾಗ, ಆಕೆಯ ಪುಟ್ಟ ತೋಳುಗಳು ನನ್ನನ್ನು ಆವರಿಸಿಕೊಂಡಿತು. ಪ್ರತಿ ನೋವನ್ನು ಸಾರ್ಥಕಗೊಳಿಸುವ ನನ್ನ ಜೀವನದ ಏಕೈಕ ಅಧ್ಯಾಯ ನೀನು ಎಂದು ಮಗಳ ಬಗ್ಗೆ ಬರೆದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಪವಿತ್ರಾ ಗೌಡ ಹೀಗೇ ಬರೆದುಕೊಂಡಿದ್ದಾರೆ. when the world turned its back, her little arms wrapped around me
she is the only chapter of my life that makes every pain worth it
ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿ ಮಾಡೆಲ್, ನಟಿ ಪವಿತ್ರಾ ಗೌಡ ಸದ್ಯ ತಮ್ಮ ರೆಡ್ ಕಾರ್ಪೆಟ್ ಉದ್ಯಮದ ಕಡೆ ಗಮನ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಉದ್ಯಮ ಸಲುವಾಗಿ ಆಗಾಗ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಇನ್ನೂ ಮಗಳ ಜತೆ ದೇವಸ್ಥಾನ ಭೇಟಿಯ ಪೋಟೋವನ್ನು ಹಾಕುತ್ತಿರುತ್ತಾರೆ. ಈ ನಡುವೆ ಮಗಳ ಬಗ್ಗೆ ತಮ್ಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.