ಭಾರತ ರತ್ನ ಪ್ರಶಸ್ತಿ ನಮ್ಮಪ್ಪನ ಕಾಲ ಬೆರಳಿಗೆ ಸಮ: ನಂದಮೂರಿ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ
ತೆಲುಗು ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ನಂದಮೂರಿ ಬಾಲಕೃಷ್ಣ, ಭಾರತ ರತ್ನ ಪ್ರಶಸ್ತಿ ನನ್ನ ತಂದೆ ಎನ್ಟಿಆರ್ ಅವರ ಕಾಲಿನ ಬೆರಳಿನ ಉಗುರಿಗೆ ಸಮಾನ. ಯಾವ ಪ್ರಶಸ್ತಿಗಳೂ ನಮ್ಮ ಕುಟುಂಬ ಟಾಲಿವುಡ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಮೀರಿಸಲು ಸಾಧ್ಯವಿಲ್ಲ. ನಮಗ್ಯಾರಿಗೂ ಪ್ರಶಸ್ತಿಗಳು ಬಂದಿಲ್ಲವೆಂದರೆ ಆ ಪ್ರಶಸ್ತಿಗಳೇ ಬೇಸರ ಮಾಡಿಕೊಳ್ಳಬೇಕೇ ಹೊರತು ನಾವಲ್ಲ ಎಂದು ಹೇಳಿದ್ದಾರೆ.
ಎ.ಆರ್. ರೆಹಮಾನ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ನಂದಮೂರಿ ಬಾಲಕೃಷ್ಣ, ಎ.ಆರ್. ರೆಹಮಾನ್ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅವರು ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆಂದು ಕೇಳಿದ್ದೇನೆ. ಆದರೆ, ನನಗಿನ್ನೂ ಅವರು ಯಾರೆಂದೇ ಗೊತ್ತಾಗಿಲ್ಲ. ರೆಹಮಾನ್ ಎಲ್ಲೋ ಹತ್ತು ವರ್ಷಕ್ಕೊಂದು ಹಿಟ್ ಗೀತೆಯನ್ನು ಕೊಡುತ್ತಾರೆ ಅಷ್ಟೆ ಎಂದು ಲೇವಡಿ ಮಾಡಿದ್ದಾರೆ.
ಬಾಲಕೃಷ್ಣ ಹೇಳಿಕೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ, ಎಆರ್ ರೆಹಮಾನ್ ಅಭಿಮಾನಿಗಳು ಹ್ಯಾಶ್ ಟಾಗ್ ಬಳಸಿ WhoIsBalakrishna ಎಂದು ಟ್ರೋಲ್ ಮಾಡುತ್ತಿದ್ದಾರೆ.