ಚೆನ್ನೈ: ನಟಿ ನಯನತಾರಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಅನ್ನಪೂರ್ಣಿ ಸಿನಿಮಾದಲ್ಲಿ ಹಿಂದೂಗಳ ಆರಾಧ‍್ಯ ದೈವ ರಾಮನ ಬಗ್ಗೆ ಅವಹೇಳನಕಾರೀ ಡೈಲಾಗ್ ವಿವಾದಕ್ಕೆ ಕಾರಣವಾಗಿತ್ತು.
ಶ್ರೀರಾಮ ಮಾಂಸಾಹಾರಿ ಎಂಬ ಡೈಲಾಗ್ ಸೇರಿದಂತೆ ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶಗಳಿತ್ತು ಎಂಬುದು ವಿವಾದಕ್ಕೆ ಕಾರಣವಾಗಿತ್ತು. ವಿವಾದದಗಳ ಬೆನ್ನಲ್ಲೇ ನೆಟ್ ಫ್ಲಿಕ್ಸ್ ಸಿನಿಮಾವನ್ನು ಡಿಲೀಟ್ ಮಾಡಿತ್ತು.
ಈ ಬಗ್ಗೆ ಇದೀಗ ನಾಯಕಿ ನಯನತಾರಾ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವಿವಾದಿತ ಡೈಲಾಗ್ ಬಗ್ಗೆ ತಮ್ಮ ಅನಿಸಿಕೆ ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಮಾಡುವುದು ಎಂದರೆ ಕೇವಲ ಹಣಕಾಸಿನ ಲಾಭಕ್ಕೆ ಮಾತ್ರವಲ್ಲ, ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಉದ್ದೇಶವೂ ಇರುತ್ತದೆ. ಅನ್ನಪೂರ್ಣಿ ಚಿತ್ರವನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡಲಾಗಿತ್ತು. ನಿಜ ಜೀವನದಲ್ಲಿ ನಡೆಯುವುದನ್ನೇ ತೋರಿಸಲು ಉದ್ದೇಶಿಸಲಾಗಿತ್ತು. ನಾನು ಮತ್ತು ನನ್ನ ತಂಡ ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವ ಉದ್ದೇಶ ಹೊಂದಿರಲಿಲ್ಲ. ಆಗಾಗ ದೇವಾಲಯಗಳಿಗೆ ಭೇಟಿ ನೀಡುವ ಆಸ್ತಿಕಳು ನಾನು. ಹೀಗಾಗಿ ನಮ್ಮಿಂದಾಗಿ ನಿಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನನ್ನ ಮತ್ತು ತಂಡದ ಪರವಾಗಿ ಕ್ಷಮೆ ಇರಲಿ ಎಂದು ನಯನತಾರಾ ಹೇಳಿದ್ದಾರೆ.