ಬೆಂಗಳೂರು: ಬಿಗ್ ಬಾಸ್ ಮನೆಗೆ ಈ ವಾರದ ಟಾಸ್ಕ್ ನಲ್ಲಿ ಜೋಡಿ ಸ್ಪರ್ಧಿಗಳಿಗೆ ಒಂದು ಗೊಂಬೆಯನ್ನು ಕೊಡಲಾಗಿತ್ತು. ಯಾವ ಜೋಡಿಗೆ ಆ ಗೊಂಬೆ ಸಿಗುತ್ತದೆಯೊ ಅವರು ಅದನ್ನು ಗೊಂಬೆಯೆಂದು ಪರಿಗಣಿಸದೆ, ಅದು ತಮ್ಮ ಮಗು ಎಂದು ತಿಳಿಯಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದರು. ಹಾಗೆ ಆ ಗೊಂಬೆ ಅತ್ತಾಗ ಮಗುವಿನಂತೆ ಸಮಾಧಾನ ಪಡಿಸಬೇಕು , ಅದನ್ನು ನಗಿಸಬೇಕು, ಅದರ ಜೊತೆ ಆಟವಾಡಬೇಕು ಎಂದೂ ಕೂಡ ಹೇಳಿದ್ದಾರೆ.
ಆ ಗೊಂಬೆ ಮೊದಲನೇಯ ಬಾರಿ ನಿವೇದಿತಾ ಹಾಗು ಚಂದನ್ ಅವರ ಜೋಡಿಗೆ ಸಿಕ್ಕಿದ್ದು, ನಿವೇದಿತಾ ಅವರು ಮಗುವನ್ನು ಸಂತೈಸುವ ರೀತಿಯನ್ನು ನೋಡಿದರೆ ಪ್ರೇಕ್ಷಕರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ.
ಹಾಗೆ ಬಿಗ ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿದ ಸಂಯುಕ್ತ ಹಾಗು ಲಾಸ್ಯ ವೈಲ್ಡ್ ಕಾರ್ಡ್ ಎಂಟ್ರಿಯ ಸ್ಪರ್ಧಿಗಳಾಗಿದ್ದು, ಈಗಷ್ಟೆ ಬಿಗ್ ಬಾಸ್ ಮನೆಗೆ ಪಾದರ್ಪಣೆ ಮಾಡುವುದರ ಜತೆಗೆ ನಿವೇದಿತಾ ಅವರ ಮುಖವಾಡವನ್ನು ಕಳಚುವ ಸಾಹಸದಲ್ಲಿ ತೊಡಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ