ಹುಟ್ಟುವ ಮಗು ಗಂಡೊ, ಹೆಣ್ಣೊ ಎಂದು ತಿಳಿಯುವುದು ಹೇಗೆ ಗೊತ್ತಾ…?

ಸೋಮವಾರ, 11 ಡಿಸೆಂಬರ್ 2017 (11:00 IST)
ಬೆಂಗಳೂರು: ತಾನು ಗರ್ಭಿಣಿ ಎಂದು ತಿಳಿದ ಬಳಿಕ ತಾಯಿಗೆ ತನ್ನ ಗರ್ಭದಲ್ಲಿರುವ ಮಗು ಗಂಡೊ, ಹೆಣ್ಣೊ ಎಂಬ ಕುತೂಹಲ ಇದ್ದೆ ಇರುತ್ತದೆ.ಹಾಗೆ ಮನೆಯವರಿಗೂ ಕೂಡ ಮಗು ಯಾವುದು ಎಂಬ ಕುತೂಹಲ ಇರುತ್ತದೆ. ಮಗು ಯಾವುದು ಎಂದು ತಿಳಿದರೆ ಅದಕ್ಕೆ ಬೇಕಾಗಿರುವ ವಸ್ತುಗಳನ್ನು ಹಾಗು ಹೆಸರನ್ನು ಆಯ್ಕೆ ಮಾಡಬಹುದೆಂಬ ಬಯಕೆ. ಆದರೆ ಮಗುವಿನ ಲಿಂಗವನ್ನು ಪತ್ತೆ ಹಚ್ಚುವುದು ಕಾನೂನಿನ ವಿರುದ್ಧವಾಗಿರುವ ಕಾರಣ ಇದನ್ನು ವೈದ್ಯರಿಂದ ತಿಳಿಯಲು ಸಾಧ್ಯವಿಲ್ಲ. ಆದರೆ ಕೆಲವೊಂದು ಸೂಚನೆಗಳಿಂದ ನಾವೆ ತಿಳಿಯಬಹುದು.


 ಮೊದಲನೆಯದಾಗಿ ಮಗು ಗಂಡಾಗಿದ್ದರೆ ಹೊಟ್ಟೆಯ ಸ್ಥಾನ ಕೆಳಗಿರುತ್ತದೆ , ಹೆಣ್ಣಾಗಿದ್ದರೆ ಹೊಟ್ಟೆಯ ಸ್ಥಾನ ಮೇಲಿರುತ್ತದೆ.ಸೂಕ್ಷ್ಮವಾಗಿ ಗಮನಿಸಿದರೆ ಅದು ತಿಳಿಯುತ್ತದೆ. ಎರಡನೇಯದಾಗಿ ಗರ್ಭಿಣಿಯ ಕೊನೆಯ ತಿಂಗಳ ಮೂತ್ರದ ಬಣ್ಣ ಗಾಢವಾಗಿದ್ದರೆ ಗಂಡುಮಗುವೆಂದು, ಮೋಡದಂತೆ ಮಸುಕಾಗಿದ್ದರೆ ಹೆಣ್ಣು ಮಗು ಎಂದು ತಿಳಿಯಬಹುದು. ಮೂರನೇಯದಾಗಿ ಗರ್ಭಾವಸ್ಥೆಯಲ್ಲಿ ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡರೆ ಆವಾಗ ಗಂಡುಮಗು ಆಗುತ್ತದೆ ಎಂದು ತಿಳಿಯಬಹುದು.


ಹಾಗೆ ಹಿರಿಯರ ಪ್ರಕಾರ  ಹೊಟ್ಟೆಯ ಗಾತ್ರ ಚಿಕ್ಕದಾಗಿದ್ದರೆ ಗಂಡುಮಗು, ದೊಡ್ಡದಾಗಿದ್ದರೆ ಹೆಣ್ಣು ಮಗು ಎಂದು ಹೇಳುತ್ತಾರೆ. ಹೆರಿಗೆಯ ಸಮಯ ಹತ್ತಿರವಾಗುತ್ತಿದ್ದಂತೆ ಸ್ತನಗಳ ಗಾತ್ರ ದೊಡ್ಡದಾಗುತ್ತದೆ. ಆವಾಗ ಬಲಸ್ತನ ಎಡಸ್ತನಕ್ಕಿಂತ ದೊಡ್ಡದಾಗಿದ್ದರೆ ಗಂಡುಮಗು ಎಂದು ತಿಳಿಯಬಹುದು.ವೈದ್ಯರ ಬಳಿ ತಪಾಸಣೆಗೆ ಹೋದಾಗ ಮಗುವಿನ ಹೃದಯ ಬಡಿತದ ವೇಗ ನಿಮಿಷಕ್ಕೆ 140ಕ್ಕಿಂತ ಕಡಿಮೆ ಇದ್ದರೆ ಅದು ಗಂಡುಮಗುವಾಗಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ