ತಮ್ಮ ಕನಸಿನ ಮನೆಗೆ ಅನುಪಮಾ ನಮ್ಮ ಮನೆ ಎಂದು ಹೆಸರಿಟ್ಟಿದ್ದಾರೆ. ಇದರ ಗೃಹಪ್ರವೇಶ ಸಮಾರಂಭಕ್ಕೆ ಹಿರಿಯ ನಟಿ ಶ್ರುತಿ ಸೇರಿದಂತೆ ಸ್ಯಾಂಡಲ್ ವುಡ್, ಕಿರುತೆರೆ ಕಲಾವಿದರು ಬಂದು ಶುಭ ಕೋರಿದ್ದಾರೆ. ಅನುಪಮಾ ನೆಚ್ಚಿನ ಸ್ನೇಹಿತ ನೇಹಾ ತುಂಬು ಗರ್ಭಿಣಿಯಾಗಿದ್ದರೂ ಗೃಹಪ್ರವೇಶಕ್ಕೆ ಬಂದು ಭಾವುಕರಾಗಿ ಸಂದೇಶ ಬರೆದುಕೊಂಡಿದ್ದಾರೆ.
ನಿನ್ನ ಜೀವನದ ವಿಶೇಷ ಸಾಧನೆಯಿದು, ನೀನು ನನಗೆ ಹಲವಾರು ವಿಚಾರದಲ್ಲಿ ಸ್ಪೂರ್ತಿ. ನಿನ್ನ ಈ ಕನಸಿನ ಮನೆಗೆ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ. ಅನುಪ್ರಭಾಕರ್, ದಿವ್ಯ ಉರುಡುಗ, ಕಿಶನ್ ಸೇರಿದಂತೆ ಅನೇಕರು ಬಂದು ಅನುಪಮಾಗೆ ಶುಭ ಹಾರೈಸಿದ್ದಾರೆ.