ಕನ್ನಡದ ಬೆಡಗಿ ನಿಕಿಶಾ ಪಟೇಲ್ ಗೊತ್ತಲ್ವಾ? ನರಸಿಂಹ, ಡಕೋಟಾ ಪಿಕ್ಚರ್, ವರದನಾಯಕ, ನಮಸ್ತೆ ಮೇಡಂ, ಅಲೋನ್ ನಂತಹ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವ ತಾರೆ. ಈ ಬೆಡಗಿ ತೆರೆ ಮೇಲಷ್ಟೇ ಅಲ್ಲ ಖಾಸಗಿ ಬದುಕಿನಲ್ಲೂ ಬೋಲ್ಡ್ ಎಂಬುಗು ಗೊತ್ತಾಗಿದೆ.
ತನ್ನ ಮದುವೆ ಬಗ್ಗೆ ನಿಕಿಶಾ ಮಾತನಾಡುತ್ತಾ, ಇನ್ನೂ ಅಂದುಕೊಂಡಿಲ್ಲ. ಗಂಡ ಹೆಂಡತಿಯಾಗಿ ಬದುಕಲು ಮದುವೆ ಎಂಬ ಬಂಧನನ ಬೇಕಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಮದುವೆಯಾಗಿ ವೈವಾಹಿಕ ಜೀವನ ನಡೆಸುತ್ತಿರುವ ಪ್ರತಿಯೊಬ್ಬರೂ ಸುಖವಾಗಿದ್ದಾರೆ ಎಂಬ ನಂಬಿಕೆ ಇಲ್ಲ.