ಲವ್ವಲ್ಲಿ ಬಿದ್ದಿದ್ದಾಳಂತೆ ರೌಡಿ ಬೇಬಿ ನಿಶಾ ರವಿಕೃಷ್ಣನ್: ಲೈವ್ ಲ್ಲೇ ಬಯಲಾಯ್ತು ನಿಜ

Krishnaveni K

ಗುರುವಾರ, 26 ಡಿಸೆಂಬರ್ 2024 (14:27 IST)
ಬೆಂಗಳೂರು: ರೌಡಿ ಬೇಬಿ ಎಂದೇ ಜನಪ್ರಿಯರಾಗಿರುವ ಕಿರುತೆರೆಯ ಖ್ಯಾತ ನಟಿ ನಿಶಾ ರವಿಕೃಷ್ಣನ್ ಲವ್ವಲ್ಲಿ ಬಿದ್ದಿದ್ದಾರಂತೆ. ಅವರ ಪ್ರೇಮ ಸಮಾಚಾರ ಜೀ ಕನ್ನಡ ವೇದಿಕೆಯಲ್ಲೇ ಬಟಾ ಬಯಲಾಗಿದೆ.

ಜೀ ಕನ್ನಡದ ಗಟ್ಟಿಮೇಳ ಧಾರವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಿಶಾ ರವಿಕೃಷ್ಣನ್ ಈಗ ತೆಲುಗು ಮತ್ತು ಕನ್ನಡ ಎರಡೂ ಕಿರುತೆರೆಯಲ್ಲಿ ಸೂಪರ್ ಹಿಟ್ ಧಾರವಾಹಿಗಳಿಗೆ ನಾಯಕಿಯಾಗಿದ್ದಾರೆ. ಪ್ರಸ್ತುತ ಅವರು ಜೀ ಕನ್ನಡದಲ್ಲಿ ಅಣ್ಣಯ್ಯ ಧಾರವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ.

ಜೀ ಕನ್ನಡದ ಹೊಸ ವರ್ಷಾರಂಭ ಕಾರ್ಯಕ್ರಮದಲ್ಲಿ ನಿಶಾ ಕೂಡಾ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಒಂದನ್ನು ಜೀ ವಾಹಿನಿ ಹೊರಬಿಟ್ಟಿದೆ. ಇದರಲ್ಲಿ ಪ್ರಾಂಕ್ ಮಾಡುವ ಗೇಮ್ ಒಂದು ಬರುತ್ತದೆ. ಅದರಂತೆ ನಿಶಾ ತಮ್ಮ ತಾಯಿಗೆ ಕರೆ ಮಾಡಿ ಪ್ರಾಂಕ್ ಮಾಡಲು ಡೇರ್ ಕೊಡಲಾಗುತ್ತದೆ.

ಅದರಂತೆ ನಿಶಾ ತಮ್ಮ ತಾಯಿಗೆ ಕರೆ ಮಾಡಿ ‘ಅಮ್ಮ ಅದೇ ನಾನು ಒಂದು ಹುಡುಗನ್ನ ಪ್ರೀತಿಸುತ್ತಿದ್ನಲ್ಲಾ’ ಎಂದು ಪ್ರಾಂಕ್ ಮಾಡಲು ಹೇಳುತ್ತಾರೆ. ಆದರೆ ಅದನ್ನು ಅರಿಯದೇ ಅವರ ತಾಯಿ ‘ಹಾ.. ಗೊತ್ತಲ್ಲ ಹೇಳು’ ಅಂತಾರೆ. ಇದನ್ನು ಕೇಳಿ ಸ್ವತಃ ನಿಶಾ ಶಾಕ್ ಆದರೆ ಅಲ್ಲಿದ್ದ ಎಲ್ಲಾ ಕಲಾವಿದರೂ ಜೋರಾಗಿ ನಗುತ್ತಾರೆ. ಆ ಮೂಲಕ ನಿಶಾ ಅಮ್ಮನೇ ಮಗಳು ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಬಹಿರಂಗಪಡಿಸಿದಂತಾಗಿದೆ. ಈ ಪ್ರೋಮೋ ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ