ನಿರ್ದೇಶಕ ವೆಂಕಿ ಕುಡುಮುಲ ಬರ್ತ್ ಡೇ ಗೆ ಭರ್ಜರಿ ಗಿಫ್ಟ್ ಕೊಟ್ಟ ನಟ ನಿತಿನ್

ಗುರುವಾರ, 10 ಸೆಪ್ಟಂಬರ್ 2020 (09:25 IST)
ಹೈದರಾಬಾದ್ : ಟಾಲಿವುಡ್ ನ ನಟ ನಿತಿನ್ ಯುವ ನಿರ್ದೇಶಕ ವೆಂಕಿ ಕುಡುಮುಲ ಅವರ ಬರ್ತ್ ಡೇ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಚಲೋ ಸಿನಿಮಾದ ನಿರ್ದೇಶನದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ  ಯುವ ನಿರ್ದೇಶಕ ವೆಂಕಿ ಕುಡುಮುಲ ಅವರು ನಟ ನಿತಿನ್ ಅಭಿನಯದ ಭೀಷ್ಮ ಚಿತ್ರವನ್ನು ನಿರ್ದೇಶನ ಮಾಡಿದ್ದರು.  ಸೆಪ್ಟಂಬರ್ 8ರಂದು  ನಿರ್ದೆಶಕ ವೆಂಕಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ನಟ ನಿತಿನ್ ವೆಂಕಿಗೆ ಐಶಾರಾಮಿ ರೇಂಜ್ ರೋವರ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಇದಕ್ಕೆ ನಿರ್ದೇಶಕ ವೆಂಕಿ ಥ್ಯಾಂಕ್ಸ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ