ಅಪ್ಪು ಕೊನೆಯ ಸಿನಿಮಾ ಜೇಮ್ಸ್ ಗಾಗಿ ವಿತರಕರು ಕೈಗೊಂಡ ನಿರ್ಧಾರ ಕೇಳಿದರೆ ಹೆಮ್ಮೆಯೆನಿಸುತ್ತದೆ!

ಮಂಗಳವಾರ, 8 ಫೆಬ್ರವರಿ 2022 (09:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿರುವ ಜೇಮ್ಸ್ ಸಿನಿಮಾ ಮಾರ್ಚ್ 17 ರಂದು ಬಿಡುಗಡೆಯಾಗುವುದು ಹೆಚ್ಚು ಕಡಿಮೆ ಕನ್ ಫರ್ಮ್ ಆಗಿದೆ.

ಇದರ ಜೊತೆಗೆ ಪ್ರೀತಿಯ ಅಪ್ಪುಗಾಗಿ ಸ್ಯಾಂಡಲ್ ವುಡ್ ವಿತರಕರು ಕೈಗೊಂಡ ನಿರ್ಧಾರ ಇನ್ನಷ್ಟು ಹೆಮ್ಮೆ ಉಂಟುಮಾಡುತ್ತದೆ.

ಮೂಲಗಳ ಪ್ರಕಾರ ಜೇಮ್ಸ್ ಬಿಡುಗಡೆಯಾಲಿರುವ ದಿನದಿಂದ ಒಂದು ವಾರ ಕಾಲ ಅಂದರೆ ಮಾರ್ಚ್ 17 ರಿಂದ 24 ರವರೆಗೆ ಬೇರೆ ಯಾವುದೇ ಸಿನಿಮಾಗಳನ್ನು ಪ್ರದರ್ಶಿಸದೇ ಇರಲು ವಿತರಕರು ತೀರ್ಮಾನಿಸಿದ್ದಾರಂತೆ. ಈ ಮೂಲಕ ಅಪ್ಪುವಿಗೆ ಗೌರವ ಸಲ್ಲಿಸಲು ಚಿತ್ರರಂಗ ನಿರ್ಧರಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ