ಬಸ್ ನಲ್ಲಿ ಪುನೀತ್ ಫೋಟೋ ನೋಡಿ ಕಣ್ಣೀರು ಸುರಿಸಿದ ಅಜ್ಜಿ: ವಿಡಿಯೋ ವೈರಲ್
ಪವರ್ ಸ್ಟಾರ್ ಅಪ್ಪು ಅಕಾಲಿಕ ಸಾವು ಎಷ್ಟೋ ಮಂದಿಗೆ ಆಘಾತ ನೀಡಿದೆ. ಹಲವರು ತಮಗೆ ತೋಚಿದ ರೀತಿಯಲ್ಲಿ ಅಪ್ಪು ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಆದರೆ ಇಲ್ಲೊಬ್ಬ ಅಜ್ಜಿ ಬಸ್ ನಲ್ಲಿ ಜಾಹೀರಾತಿನಲ್ಲಿರುವ ಪುನೀತ್ ಫೋಟೋ ನೋಡಿ ಕಣ್ಣೀರು ಸುರಿಸುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ಕೆಎಸ್ ಆರ್ ಟಿಸಿ ಬಸ್ ಒಂದರಲ್ಲಿ ಅಂಟಿಸಲಾಗಿರುವ ಜಾಹೀರಾತಿನಲ್ಲಿ ಅಪ್ಪು ಫೋಟೋ ನೋಡಿ ಅದಕ್ಕೊರಗಿ ವೃದ್ಧ ಮಹಿಳೆ ಕಣ್ಣೀರು ಇಡುತ್ತಿದ್ದಾರೆ. ಈ ದೃಶ್ಯ ಎಷ್ಟೋ ಮಂದಿಯ ಕಣ್ಣಂಚು ಒದ್ದೆ ಮಾಡಿದೆ.