ಜೀ ಕನ್ನಡದಲ್ಲಿ ಪೈಲ್ವಾನ್ ಸಿನಿಮಾ ಪ್ರಸಾರವಾಗೋದು ಈ ದಿನ

ಶುಕ್ರವಾರ, 3 ಜನವರಿ 2020 (09:10 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುಭಾಷೆಗಳಲ್ಲಿ ಬಿಡುಗಡೆಯಾದ ಪೈಲ್ವಾನ್ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರವಾಗುವುದಾಗಿ ಕೆಲವು ದಿನಗಳ ಹಿಂದೆಯೇ ವಾಹಿನಿ ಪ್ರಕಟಿಸಿತ್ತು.


ಆದರೆ ಯಾವಾಗ ಎಂದು ದಿನಾಂಕ ಪ್ರಕಟಿಸಿರಲಿಲ್ಲ. ಈಗ ಪೈಲ್ವಾನ್ ಪ್ರಸಾರ ದಿನಾಂಕ ಬಹಿರಂಗಗೊಳಿಸಿದ್ದು, ಜನವರಿ 12 ರಂದು ಭಾನುವಾರ ಪ್ರಸಾರವಾಗುತ್ತಿರುವುದಾಗಿ ತಿಳಿಸಿದೆ.

ಇದಕ್ಕೂ ಮೊದಲು ಹಿಂದಿ ಕಿರುತೆರೆಯಲ್ಲಿ ಪೈಲ್ವಾನ್ ಪ್ರಸಾರವಾಗಿತ್ತು. ಆದರೆ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗಲಿದೆ. ಕಿಚ್ಚನ ಪೈಲ್ವಾನ್ ಸಿನಿಮಾ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾವಾಗಿತ್ತು. ಪೈಲ್ವಾನ್ ನ ಪಟ್ಟು ನೋಡಲು ರೆಡಿಯಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ