ನಮ್ಮ ಸೈನಿಕರೇ ಶ್ರೇಷ್ಠ, ಸಿನೆಮಾ ಹಿರೋಗಳಲ್ಲ: ಸಲ್ಮಾನ್‌ಗೆ ನಾನಾ ಪಾಟೇಕರ್ ಟಾಂಗ್

ಸೋಮವಾರ, 3 ಅಕ್ಟೋಬರ್ 2016 (14:21 IST)
ಭಾರತದಿಂದ ಪಾಕಿಸ್ತಾನ ಕಲಾವಿದರು ತೊಲಗಬೇಕು ಎನ್ನುವ ಹೇಳಿಕೆ ಸುತ್ತ ವಿವಾದಗಳ ಹುತ್ತ ಹಬ್ಬಿದೆ. ಇದೀಗ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್, ಸೈನಿಕರು ನಿಜವಾದ ಹಿರೋಗಳು, ಅವರಿಗಿಂತ ಯಾರು ಉತ್ತಮ ಹಿರೋಗಳಲ್ಲ ಎಂದು ಸಲ್ಮಾನ್ ಖಾನ್‌ಗೆ ಟಾಂಗ್ ನೀಡಿದ್ದಾರೆ.
 
65 ವರ್ಷ ವಯಸ್ಸಿನ ಬಾಲಿವುಡ್ ನಟ ಪಾಟೇಕರ್, ಪಾಕ್ ಕಲಾವಿದರ ಪರವಾಗಿ ಹೇಳಿಕೆ ನೀಡಿದವರ ವಿರುದ್ಧ ಗರಂ ಆಗಿದ್ದಾರೆ. ದೇಶದ ಸಾರ್ವಭೌಮತೆಯ ಮುಂದೆ ಕಲಾವಿದರು ಏನು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ದೇಶವೇ ನಮಗೆ ಮೊದಲು ನಂತರ ಪಾಕ್ ಕಲಾವಿದರು ಇತರ ಕಲಾವಿದರು ಬರುತ್ತಾರೆ.  ನಮ್ಮ ದೇಶಕ್ಕಿಂತ ಹೆಚ್ಚಿನದು ಯಾವುದು ಇಲ್ಲ ಎಂದು ಗುಡುಗಿದ್ದಾರೆ.
 
ಸಲ್ಮಾನ್ ಖಾನ್ ಹೇಳಿಕೆಯ ಬಗ್ಗೆ ತಿರುಗೇಟು ನೀಡಿದ ಪಾಟೇಕರ್, ಸೈನಿಕರಿಗಿಂತ ಮತ್ತೊಬ್ಬ ಹಿರೋ ಇಲ್ಲ. ಕಲಾವಿದರು ನಾವು ಸಾಮಾನ್ಯ ಜನರಂತೆ, ನಿಜವಾದ ಹಿರೋಗಳು ನಮ್ಮ ಸೈನಿಕರು. ಪಾಕ್ ಕಲಾವಿದರ ಬಗ್ಗೆ ಮಾತನಾಡುವವರನ್ನು ನಿರ್ಲಕ್ಷಿಸಿ. ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.
 
ಇದಕ್ಕಿಂತ ಮೊದಲು ಸಲ್ಮಾನ್ ಖಾನ್, ಪಾಕಿಸ್ತಾನದಿಂದ ಬಂದವರು ಕಲಾವಿದರೇ ಹೊರತು ಉಗ್ರರಲ್ಲ ಎಂದು ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ