ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲಿಗೆ ಹೋದರೂ ಅಲ್ಲೂ ಡಿ ನಂಟು ಬಿಟ್ಟಿಲ್ಲ. ಪವಿತ್ರಾ ಗೌಡ ಮತ್ತು ಕೆಲವು ಆರೋಪಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. 10 ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡರನ್ನು ಈಗ ವಿಚಾರಣೆ ಮುಗಿದ ಹಿನ್ನಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳು ಇನ್ನೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಕಂಬಿ ಎಣಿಸುತ್ತಿದ್ದಾರೆ. ವಿಶೇಷವೆಂದರೆ ಜೈಲಿಗೆ ಹೋದರೂ ಅವರಿಗೆ ಡಿ ನಂಟು ಬಿಟ್ಟಿಲ್ಲ. ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡಗೆ ವಿಚಾರಾಧೀನ ಕೈದಿ ಸಂಖ್ಯೆ 6024 ನೀಡಲಾಗಿದೆ. ಇಲ್ಲಿ ಅವರನ್ನು ಡಿ ಬ್ಲಾಕ್ ನಲ್ಲಿರಿಸಲಾಗಿದೆ.
ಡಿ ಗ್ಯಾಂಗ್ ಮಾಡಿದ ಅವಾಂತರದಿಂದ ರೇಣುಕಾಸ್ವಾಮಿ ಹತ್ಯೆಯಾಗಿ ಜೈಲು ಸೇರಿರುವ ಪವಿತ್ರಾಗೆ ಈಗ ಜೈಲು ಸೇರಿದರೂ ಡಿ ನಂಟು ಬಿಟ್ಟಿಲ್ಲ. ಐಷಾರಾಮಿ ಜೀವನಕ್ಕೆ ಒಗ್ಗಿ ಹೋಗಿರುವ ಪವಿತ್ರಾ ಈಗ ಜೈಲಿನಲ್ಲಿ ಸರಿಯಾಗಿ ಊಟವಿಲ್ಲದೇ ನಿದ್ರೆಯಿಲ್ಲದೇ ಕಾಲ ಕಳೆಯುತ್ತಿದ್ದಾರೆ.