ಸತ್ಯಕ್ಕೆ ಜಯ ಇದ್ದೇ ಇದೆ ಎಂದ ಪವಿತ್ರಾ ಗೌಡ: ಹಾಗಿದ್ರೆ ರೇಣುಕಾಸ್ವಾಮಿ ಸತ್ತಿದ್ದು ಹೇಗೆ ಎಂದ ನೆಟ್ಟಿಗರು

Krishnaveni K

ಗುರುವಾರ, 14 ಆಗಸ್ಟ್ 2025 (09:38 IST)
ಬೆಂಗಳೂರು: ಸುಪ್ರೀಂಕೋರ್ಟ್ ನಲ್ಲಿ ಇಂದು ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳ ಬೇಲ್ ರದ್ದಾಗುತ್ತಾ ಮುಂದುವರಿಯಬೇಕೇ ಎಂಬ ಬಗ್ಗೆ ತೀರ್ಪು ಪ್ರಕಟವಾಗಲಿದೆ. ಇದರ ಬೆನ್ನಲ್ಲೇ ಪವಿತ್ರಾ ಗೌಡ ಸತ್ಯಕ್ಕೆ ಜಯ ಇದ್ದೇ ಇದೆ ಎಂದು ಪೋಸ್ಟ್ ಮಾಡಿದ್ದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತನಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ರೇಣುಕಾಸ್ವಾಮಿಯ ಹತ್ಯೆಗೆ ಪವಿತ್ರಾ ಗೌಡರೇ ಪ್ರೇರಣೆಯಾಗಿದ್ದರು ಎಂದು ಆರೋಪವಾಗಿದೆ. ಪ್ರಕರಣದಲ್ಲಿ ಪವಿತ್ರಾ ಎ1 ಆರೋಪಿ. ಜೂನ್ 9 ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿ ಹತ್ಯೆಯಾಗಿತ್ತು.

ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಬೇಲ್ ಪ್ರಶ್ನಿಸಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ಇಂದು ತೀರ್ಪು ಹೊರಬರಲಿದೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ‘ಸತ್ಯ ಎಲ್ಲಕ್ಕಿಂತ ಬಲಶಾಲಿಯಾಗಿದ್ದು. ಅದಕ್ಕೆ ಯಾವತ್ತೂ ಜಯ ಇದ್ದೇ ಇದೆ. ಎಷ್ಟೇ ಸಮಯ ತೆಗೆದುಕೊಂಡರೂ ಸತ್ಯ ಹೊರಬರಲೇ ಬೇಕು’ ಎಂದು ಬರೆದುಕೊಂಡಿದ್ದಾರೆ.

ಪವಿತ್ರಾ ಗೌಡ ಈ ಪೋಸ್ಟ್ ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.  ನಿಮ್ಮ ತಪ್ಪಿನಿಂದ ಎರಡು ಕುಟುಂಬಗಳು ಹಾಳಾಗಿವೆ. ಈಗ ಸತ್ಯದ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಹಾಗಿದ್ದರೆ ರೇಣುಕಾಸ್ವಾಮಿ ಸತ್ತಿದ್ದು ಹೇಗೆ ಎಂದಿದ್ದಾರೆ. ಅದೇನೇ ಇರಲಿ, ಪ್ರಕರಣದಲ್ಲಿ ತಮ್ಮ ತಪ್ಪು ಇಲ್ಲ. ತಾವು ಹಲ್ಲೆಯಲ್ಲೂ ಭಾಗಿಯಾಗಿಲ್ಲ ಎನ್ನುವುದು ಪವಿತ್ರಾ ಗೌಡ ವಾದವಾಗಿದೆ. ಬೇಲ್ ಪಡೆದು ಹೊರಬಂದ ಮೇಲೆ ಪವಿತ್ರಾ ತಮ್ಮ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ