ಬೆಂಗಳೂರು: ಸ್ಟಾರ್ ಗಳಿಲ್ಲ, ಅಬ್ಬರದ ಪ್ರಚಾರವಿಲ್ಲ ಹಾಗಿದ್ರೂ ಬಿಡುಗಡೆಯಾಗಿ 20 ನೇ ದಿನಕ್ಕೇ ಡಿಬಾಸ್ ದರ್ಶನ್ ರ ಕಾಟೇರ ಸಿನಿಮಾದ ದಾಖಲೆಯನ್ನು ಸು ಫ್ರಮ್ ಸೋ ಸಿನಿಮಾ ಮುರಿದಿದೆ.
ರಾಜ್ ಬಿ ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡು ನಿರ್ದೇಶಿಸಿ, ನಟಿಸಿದ್ದ ಸು ಫ್ರಮ್ ಸೋ ಸಿನಿಮಾ ಕಡಿಮೆ ಬಜೆಟ್ ನಲ್ಲಿ ಕನ್ನಡದಲ್ಲೇ ಬಿಡುಗಡೆಯಾದ ಸಿನಿಮಾ. ಆದರೆ ಈ ಸಿನಿಮಾ ಎರಡನೇ ದಿನದಿಂದ ಗಳಿಸಿದ್ದು ಮಾತ್ರ ಮ್ಯಾಜಿಕ್. ಪ್ರೇಕ್ಷಕರನ್ನು ಕುಟುಂಬ ಸಮೇತ ಹಲವು ದಿನಗಳ ನಂತರ ಥಿಯೇಟರ್ ಗೆ ಎಳೆದು ತಂದ ಸಿನಿಮಾ.
ಕೊನೆಗೆ ಮಲಯಾಳಂ, ತೆಲುಗು, ಹಿಂದಿಯಲ್ಲೂ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ಈ ಸಿನಿಮಾ ಈಗ ಗಳಿಕೆಯಲ್ಲಿ ಕಾಟೇರ ಸಿನಿಮಾವನ್ನೂ ಮೀರಿಸಿದೆ. ಸು ಫ್ರಮ್ ಸೋ ಸಿನಿಮಾ ಗಳಿಕೆ 90 ಕೋಟಿ ಸನಿಹ ಬಂದು ನಿಂತಿದೆ. ಕಾಟೇರ 80 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಕನ್ನಡದಲ್ಲೇ 63 ಕೋಟಿ ಕಲೆಕ್ಷನ್ ಮಾಡಿದೆ. ಹೊರದೇಶಗಳಲ್ಲೂ ಸಿನಿಮಾ ಬಿಡುಗಡೆಯಾಗಿದ್ದು 100 ಕೋಟಿ ಕ್ಲಬ್ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.