ಮರ್ಡರ್ ಕೇಸ್ ಇದ್ದರೇನು, ಡೆಲ್ಲಿ, ಮುಂಬೈಗೆ ಹೋಗಲಿರುವ ಪವಿತ್ರಾ ಗೌಡ

Krishnaveni K

ಬುಧವಾರ, 26 ಫೆಬ್ರವರಿ 2025 (09:41 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಈಗ ಮುಂಬೈ, ಡೆಲ್ಲಿ ಸುತ್ತಾಡಲಿದ್ದಾರೆ. ಇದಕ್ಕೆ ಈಗಾಗಲೇ ಕೋರ್ಟ್ ಅನುಮತಿಯನ್ನೂ ಪಡೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಹಲವು ದಿನ ಜೈಲುವಾಸ ಅನುಭವಿಸಿದ್ದರು. ಇದಾದ ಬಳಿಕ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿ ಹೊರಗಡೆ ಬಂದಿದ್ದರು. ಹಾಗಿದ್ದರೂ ಎಲ್ಲರೂ ತಿಂಗಳಿಗೊಮ್ಮೆ ಕೋರ್ಟ್ ಗೆ ಹಾಜರಾಗಲೇ ಬೇಕು.

ಪವಿತ್ರಾ ಗೌಡ ಈಗಾಗಲೇ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರೆಡ್ ಕಾರ್ಪ್ ಸ್ಟುಡಿಯೋವನ್ನು ರಿ ಲಾಂಚ್ ಮಾಡಿದ್ದರು. ಇದೀಗ ಆ ಸ್ಟುಡಿಯೋ ಕೆಲಸಗಳಿಗಾಗಿ ತಮಗೆ ಡೆಲ್ಲಿ, ಮುಂಬೈ ಎಂದು ಹೋಗಬೇಕಾಗಿದೆ. ಇದಕ್ಕೆ ಅನುಮತಿ ಕೊಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.

ನಿನ್ನೆ ಕೋರ್ಟ್ ಗೆ ಹಾಜರಾಗಿದ್ದ  ವೇಳೆ ಕೋರ್ಟ್ ಮುಂದೆ ತಮ್ಮ ಕೆಲಸಕ್ಕಾಗಿ ಪರರಾಜ್ಯಕ್ಕೆ ಹೋಗಲು ಅನುಮತಿ ಕೇಳಿದ್ದು ಇದಕ್ಕೆ ಕೋರ್ಟ್ ಕೂಡಾ ಅನುಮತಿ ನೀಡಿದೆ. ಮಾರ್ಚ್ 3 ರಿಂದ ಮಾರ್ಚ್ 10 ರವರೆಗೆ, ಮಾರ್ಚ್ 17 ರಿಂದ ಮಾರ್ಚ್ 26 ರವರೆಗೆ ತೆರಳಲು ಅನುಮತಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ