ಇಂದು ಮತ್ತೆ ದರ್ಶನ್ ತೂಗುದೀಪ ಮೀಟ್ಸ್ ಪವಿತ್ರಾ ಗೌಡ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ತೂಗುದೀಪ ಎ2 ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದಾರೆ. ಎಲ್ಲರಿಗೂ ಈಗ ಜಾಮೀನು ಸಿಕ್ಕಿದ್ದು ಹೊರಗಡೆ ಇದ್ದಾರೆ.
ಆದರೆ ಜಾಮೀನು ನೀಡುವಾಗ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅದರಂತೆ ಆರೋಪಿಗಳು ಪ್ರತೀ ತಿಂಗಳೂ ಖುದ್ದಾಗಿ ಕೋರ್ಟ್ ಗೆ ಹಾಜರಾಗಬೇಕು. ಅದರಂತೆ ಇಂದು ಎಲ್ಲಾ ಆರೋಪಿಗಳೂ ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್ ಗೆ ಹಾಜರಾಗಲಿದ್ದಾರೆ.
ಕಳೆದ ತಿಂಗಳು ಪವಿತ್ರಾ ಮತ್ತು ದರ್ಶನ್ ಈ ಸಂದರ್ಭದಲ್ಲಿ ಮುಖಾಮುಖಿಯಾಗಿದ್ದರು. ಇದೀಗ ಮತ್ತೊಮ್ಮೆ ಇಬ್ಬರೂ ಮತ್ತೆ ಮುಖಾಮುಖಿಯಾಗಲಿದ್ದಾರೆ. ಸದ್ಯಕ್ಕೆ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.