ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಜಾಮೀನು ಮಂಜುರಾಗಿದೆ. ಆದರೆ ಇದುವರೆಗೆ ಬಿಡುಗಡೆ ಭಾಗ್ಯ ದೊರಕಿಲ್ಲ. ಹೀಗಾಗಿ ಆಕೆ ಜೈಲಲ್ಲಿ ನಿಂತಲ್ಲಿ ನಿಲ್ಲಲಾಗದೇ ಕೂತಲ್ಲಿ ಕೂರಲಾಗದೇ ಚಡಪಡಿಸುತ್ತಿದ್ದಾರಂತೆ.
ಮೊನ್ನೆಯಷ್ಟೇ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗ ಹೈಕೋರ್ಟ್ ರೆಗ್ಯುಲರ್ ಜಾಮೀನು ಮಂಜೂರು ಮಾಡಿತ್ತು. ಕಳೆದ ಆರು ತಿಂಗಳಿನಿಂದ ದರ್ಶನ್ ಹೊರತುಪಡಿಸಿ ಉಳಿದ 6 ಆರೋಪಿಗಳು ಜೈಲಿನಲ್ಲೇ ಇದ್ದಾರೆ.
ಶುಕ್ರವಾರ ಮಧ್ಯಾಹ್ನದ ಬಳಿಕ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅದರೆ ಅದಾದ ಬಳಿಕ ಕೋರ್ಟ್ ಆದೇಶವನ್ನು ಜೈಲಿಗೆ ತಲುಪಿಸುವಷ್ಟು ಸಮಯವಿರಲ್ಲ. ನಿನ್ನೆ ಎರಡನೇ ಶನಿವಾರವಾಗಿದ್ದರಿಂದ ರಜೆಯಿತ್ತು. ಇಂದು ಭಾನುವಾರದ ರಜಾ. ಹೀಗಾಗಿ ನಾಳೆಯವರೆಗೆ ಪವಿತ್ರಾ ಗೌಡ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ.
ನಾಳೆ ಕೋರ್ಟ್ ಆದೇಶ ಪರಪ್ಪನ ಅಗ್ರಹಾರ ಜೈಲಿಗೆ ತಲುಪಿದ ಬಳಿಕವಷ್ಟೇ ಪವಿತ್ರಾ ಬಿಡುಗಡೆಯಾಗಲಿದೆ. ಒಂದೆಡೆ ಜಾಮೀನು ಸಿಕ್ಕ ಖುಷಿಯಾರೂ ಎರಡು ದಿನ ಜೈಲಿನಲ್ಲೇ ಕಳೆಯಬೇಕು ಎಂಬ ಆತಂಕ, ಚಡಪಡಿಕೆ ಅವರಲ್ಲಿದೆ.