ನೀನು ಸತ್ತರೆ ಹೆಂಡತಿ ಚೆನ್ನಾಗಿರುತ್ತಾಳೆ ಎಂದ ಮಾವ: ಪೊಲೀಸ್ ಕಾನ್ಸ್ ಟೇಬಲ್ ಮಾಡಿದ್ದೇನು

Krishnaveni K

ಶನಿವಾರ, 14 ಡಿಸೆಂಬರ್ 2024 (14:02 IST)
Photo Credit: X
ಬೆಂಗಳೂರು: ಮೊನ್ನೆಯಷ್ಟೇ ಬೆಂಗಳೂರಿನ ಮಾರತಹಳ್ಳಿಯಲ್ಲಿ ಅತುಲ್ ಸುಭಾಷ್ ಎಂಬ ಟೆಕಿ ಆತ್ಮಹತ್ಯೆ ಎಲ್ಲರ ಗಮನ ಸೆಳೆದಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ಹೆಂಡತಿ, ಮಾವನ ಕಾಟಕ್ಕೆ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹುಳಿಮಾವು ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದ ಎಚ್ ಸಿ ತಿಪ್ಪಣ್ಣ ಎಂಬಾತ ಆತ್ಮಹತ್ಯೆ  ಮಾಡಿಕೊಂಡ ವ್ಯಕ್ತಿ. ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣ ಬಳಿ ರೈಲಿಗೆ ತಲೆ ಕೊಟ್ಟು ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೆ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ತಿಪ್ಪಣ್ಣ ನನ್ನ ಸಾವಿಗೆ ನನ್ನ ಪತ್ನಿ ಮತ್ತು ಮಾವನೇ ಕಾರಣ ಎಂದಿದ್ದಾರೆ. ಮಾವ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನೀನು ಸತ್ತು ಹೋದರೆ ನಿನ್ನ ಹೆಂಡತಿ ಚೆನ್ನಾಗಿರುತ್ತಾಳೆ ಎಂದು ನನಗೆ ಅವಾಚ್ಯವಾಗಿ ಫೋನ್ ನಲ್ಲಿ ನಿಂದಿಸುತ್ತಿದ್ದರು ಎಂದು ತಿಪ್ಪಣ್ಣ ಬರೆದಿದ್ದಾರೆ.

ಈ ಬಗ್ಗೆ ತಿಪ್ಪಣ್ಣ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿ ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಇದೀಗ ಬೆದರಿಕೆ ಮತ್ತು ಉದ್ದೇಶಪೂರ್ವಕವಾಗಿ ಅವಮಾನ ಪ್ರಕರಣ ದಾಖಲಿಸಲಾಗಿದೆ. ಸಿವಿ ರಾಮನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ