ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಎಲ್ಲಾ ಆರೋಪಿಗಳೂ ಈಗ ಫ್ರೀ ಬರ್ಡ್ಸ್

Krishnaveni K

ಮಂಗಳವಾರ, 24 ಡಿಸೆಂಬರ್ 2024 (09:52 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳೂ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳಿಗೂ ಜಾಮೀನು ಸಿಕ್ಕಿದೆ.

ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಒಂದು ವಾರದ ಹಿಂದೆ ಹೈಕೋರ್ಟ್ ರೆಗ್ಯುಲರ್ ಜಾಮೀನು ನೀಡಿತ್ತು. ದರ್ಶನ್ ಮೊದಲೇ ಮಧ್ಯಂತರ ಜಾಮೀನಿನಲ್ಲಿ ಹೊರಬಂದಿದ್ದರು. ಪವಿತ್ರಾ ಗೌಡ ಆರು  ತಿಂಗಳ ಬಳಿಕ ಕಳೆದ ವಾರ ಬಿಡುಗಡೆಯಾಗಿದ್ದಳು. ಅದಾದ ಬಳಿಕ ದರ್ಶನ್ ಆಪ್ತರಾದ ನಾಗರಾಜ್, ಲಕ್ಷ್ಮಣ್, ಜಗದೀಶ್ ಕೂಡಾ ಬಿಡುಗಡೆಯಾಗಿದ್ದರು.

ಇದೀಗ ಮತ್ತೆ 5 ಮಂದಿಗೆ ಜಾಮೀನು ಮಂಜೂರಾಗಿದೆ. ಉಳಿದ ಐವರು ಆರೋಪಿಗಳಿಗೂ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ವಿನಯ್, ಪವನ್, ರಾಘವೇಂದ್ರ, ನಂದೀಶ್, ಧನರಾಜ್ ಗೂ ಈಗ ಜಾಮೀನು ಸಿಕ್ಕಿದೆ.

ಅದರೊಂದಿಗೆ ಈಗ ಎಲ್ಲಾ ಆರೋಪಿಗಳೂ ಜಾಮೀನಿನ ಮೇಲೆ ಹೊರಬಂದಂತಾಗಿದೆ. ಇದೀಗ ಎಲ್ಲರೂ ವಿಚಾರಣೆ ಸಂದರ್ಭದಲ್ಲಿ ಮಾತ್ರ ಕೋರ್ಟ್ ಗೆ ಹಾಜರಾಗಬೇಕಾಗುತ್ತದೆ. ಅದಾದ ಬಳಿಕ ಆರೋಪ ಸಾಬೀತಾದರೆ ಮಾತ್ರ ಮತ್ತೆ ಜೈಲು ಕಾಣಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ