ಮುಸಲ್ಮಾನ ಸಮುದಾಯಕ್ಕೆ ಇದ್ದ ಶೇ 4 ರಷ್ಟು ಮೀಸಲಾತಿಯನ್ನು ಹಿಂಪಡೆದು ವೀರಶೈವ ಲಿಂಗಾಯತರಿಗೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ ನಿರ್ಣಯಕ್ಕೆ ಸುಪ್ರೀಂಕೋರ್ಟ್ ನೀಡಿದ ತಾತ್ಕಾಲಿಕ ತಡೆಯಿಂದ ಸರ್ಕಾರಕ್ಕೆ ಯಾವುದೇ ಹಿನ್ನಡೆಯಾಗಿಲ್ಲ, ಅಂತಿಮವಾಗಿ ಸರ್ಕಾರಕ್ಕೆ ಗೆಲುವಾಗಲಿದೆ. ಸಂವಿಧಾನ ಬದ್ಧವಾಗಿ ಸರ್ಕಾರ ಮೀಸಲಾತಿ ಪರಿಷ್ಕರಣೆ ಮಾಡಿದೆ ಎಂದು ಸಚಿವ ಅಶ್ವತ್ಥನಾರಾಯಣ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ತೆಗೆದ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆ ತಾತ್ಕಾಲಿಕ ಮಾತ್ರ.ಅದನ್ನು ಸಂಪೂರ್ಣ ಹೊಡೆದು ಹಾಕಿಲ್ಲ. ಮುಸ್ಲಿಂ ಪ್ರವರ್ಗ ಎ, ಬಿ, ಸಿ ಯಲ್ಲೂ ಇದ್ದಾರೆ ಎಂದರು. ನ್ಯಾಯಾಲಯದಲ್ಲೇ ಇದನ್ನು ಪರಿಣಾಮಕಾರಿ ವಾದ ಮಂಡನೆ ಮಾಡಲಾಗುತ್ತದೆ. ಆ ಮೂಲಕ ಸತ್ಯ ಎತ್ತಿ ಹಿಡಿಯುವ ಕೆಲಸ ಮಾಡಲಾಗುತ್ತದೆ. ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಈಗ ಕೋರ್ಟ್ ತಾತ್ಕಾಲಿಕ ತಡೆ ಕೊಟ್ಟಿರಬಹುದು, ಆದರೆ ಅಂತಿಮವಾಗಿ ನ್ಯಾಯಾಲಯದಲ್ಲಿ ನಮ್ಮದೇ ಜಯ ಆಗಲಿದೆ. ಕೋರ್ಟ್ ತಡೆಯಿಂದ ಸರ್ಕಾರಕ್ಕೆ ಹಿನ್ನಡೆ ಆಗಿಲ್ಲ....ಮೀಸಲಾತಿ ವಿಚಾರದಲ್ಲಿ ಸರ್ಕಾರ ಬಹಳ ಸ್ಪಷ್ಟ ನಿಲುವು ತೆಗೆದುಕೊಳ್ಳಲಿದೆ. ಗೆಲುವು ನಮ್ಮ ಕಡೆ ಆಗುವಂತೆ ವಾದ ಮಾಡಲಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡ್ರು