ರಮ್ಯಾ ಕಂಪ್ಲೇಂಟ್ ಬೆನ್ನಲ್ಲೇ ಚುರುಕಾದ ಪೊಲೀಸರು: ಡಿಬಾಸ್ ಫ್ಯಾನ್ಸ್ ಅಕೌಂಟ್ ಗೆ ಗುನ್ನ

Krishnaveni K

ಮಂಗಳವಾರ, 29 ಜುಲೈ 2025 (10:20 IST)
ಬೆಂಗಳೂರು: ಅಶ್ಲೀಲ ಕಾಮೆಂಟ್ ಮಾಡಿದ ನಿಂದಿಸಿದ್ದಕ್ಕೆ ನಟಿ ರಮ್ಯಾ ಡಿಬಾಸ್ ದರ್ಶನ್ ಅಭಿಮಾನಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಚುರುಕಾಗಿ ಕಾರ್ಯಪ್ರವೃತ್ತರಾಗಿದ್ದು ಅಂತಹ ಸೋಷಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ವಿವಿಧ ಖಾತೆಗಳಿಂದ ರಮ್ಯಾಗೆ ಅಶ್ಲೀಲ ಕಾಮೆಂಟ್ ಮೂಲಕ ನಿಂದಿಸಿದ್ದರು. ಅತ್ಯಂತ ಕೆಟ್ಟ ಭಾಷೆಗಳಲ್ಲಿ ರಮ್ಯಾಗೆ ನಿಂದಿಸಿದ್ದರು.

ಇದರ ವಿರುದ್ಧ ಸಿಡಿದೆದ್ದ ರಮ್ಯಾ ನಿನ್ನೆ ಅಪರಾಹ್ನ ಕಮಿಷನರ್ ಕಚೇರಿಗೆ ತೆರಳಿ ದೂರು ನೀಡಿದ್ದರು. ರಮ್ಯಾ ಪರವಾಗಿ ಮಹಿಳಾ ಆಯೋಗ ಕೂಡಾ ಪೊಲೀಸರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚಿಸಿತ್ತು. ಇದೀಗ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ರಮ್ಯಾ ಈಗಾಗಲೇ ಅಶ್ಲೀಲ ಕಾಮೆಂಟ್ ಮಾಡಿದ ಖಾತೆಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಇದೀಗ ಅಂತಹ ಹಲವು ಖಾತೆಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ವಿಚಾರಣೆಗೆ ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಮಾಡಿ ಸೆಲೆಬ್ರಿಟಿಗಳಿಗೆ ಕಿರುಕುಳ ನೀಡುವುದು ಚಾಳಿಯಾಗಿಬಿಟ್ಟಿದೆ. ಅಂತಹವರಿಗೆ ಈ ಪ್ರಕರಣ ಒಂದು ಪಾಠವಾಗಬೇಕು ಎಂದು ರಮ್ಯಾ ಕೂಡಾ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ