ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟಿ ಪೂಜಾ ಹೆಗ್ಡೆ

ಶುಕ್ರವಾರ, 9 ಏಪ್ರಿಲ್ 2021 (11:22 IST)
ಹೈದರಾಬಾದ್ : ಭಾರತೀಯ ಚಲನಚಿತ್ರೋದ್ಯಮದ ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಇತ್ತೀಚೆಗೆ ಅವರು ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದು, ಸ್ಟಾರ್ ನಟರ ಜೊತೆ ನಟಿಸುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.

ನಟಿ ಪೂಜಾ ಹೆಗ್ಡೆ ಅವರು ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಂ’ ಚಿತ್ರದಲ್ಲಿ ನಟಿಸಲು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಬಳಿಕ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರದಲ್ಲಿ ಕೂಡ ಹೆಚ್ಚಿನ ಸಂಭಾವನೆ ಪಡೆದಿದ್ದಾರಂತೆ. ಇದೀಗ ಅವರು ವಿಜಯ್ ಅಭಿನಯದ ತಲಪತಿ 65 ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆದರೆ ಇದೀಗ ತಮ್ಮ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸಿದ್ದು , ತಲಪತಿ ಚಿತ್ರದಲ್ಲಿ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.ಹಾಗೇ ಅವರು ಮುಂದಿನ ಚಿತ್ರಗಳಲ್ಲಿ ನಟಿಸಲು ಅಷ್ಟೇ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ