ಸಾಹೋ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಶನಿವಾರ, 31 ಆಗಸ್ಟ್ 2019 (11:06 IST)
ಹೈದರಾಬಾದ್: ಬಹುಭಾಷೆಗಳಲ್ಲಿ ನಿನ್ನೆ ಭರ್ಜರಿಯಾಗಿ ಬಿಡುಗಡೆಯಾದ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದೆ.


ಮೊದಲ ದಿನವೇ ಸಾಹೋ ದಾಖಲೆಯ ಗಳಿಕೆ ಮಾಡಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅದರಂತೇ ಮೊದಲ ದಿನವೇ ಸುಮಾರು 60 ಕೋಟಿ ಗಳಿಕೆ ಮಾಡಲಾಗಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಹಿಂದಿ ಅವತರಣಿಕೆ 15-20 ಕೋಟಿ ರೂ. ಗಳಿಕೆ ಮಾಡಿದೆ. ಉಳಿದಂತೆ ಎಲ್ಲಾ ಭಾಷೆಗಳಲ್ಲಿ ಒಟ್ಟು ಸೇರಿ ಸುಮಾರು 60 ಕೋಟಿ ಗಳಿಕೆ ಅಂದಾಜಿಸಲಾಗಿದೆ. ಹಿಂದಿಯಲ್ಲಿ ಮೊದಲ ದಿನ ಗರಿಷ್ಠ ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಮೂರನೇ ಸ್ಥಾನ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ