ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ಈ ಕನ್ನಡ ಚಿತ್ರದ ರಿಮೇಕಾ?

ಮಂಗಳವಾರ, 8 ಡಿಸೆಂಬರ್ 2020 (12:54 IST)
ಹೈದರಾಬಾದ್ : ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ.

ಈ  ಚಿತ್ರ ಪ್ರಶಾಂತ್ ಅವರ ಹಿಂದಿನ ಕನ್ನಡ ಚಿತ್ರ ‘ಉಗ್ರಾಂ’ ನ ರಿಮೇಕ್ ಎಂದು ಇದನ್ನು ಪ್ರಚಾರ ಮಾಡಲಾಗುತ್ತಿದೆ. ಆದರೆ  ಅಧಿಕೃತವಾಗಿ ಈ ವಿಷಯವನ್ನು ಇಲ್ಲಿಯವರೆಗೆ ಪ್ರಸ್ತಾಪಿಸಲಾಗಿಲ್ಲ. ಆದರೆ ಉಗ್ರಾಂ ನ್ನು ನೋಡಿದ ಕೆಲವರು ಈ ಚಿತ್ರಕ್ಕೆ ಪ್ರಭಾಸ್ ಹೇಗೆ ಒಪ್ಪಿಕೊಂಡರು ಎನ್ನುತ್ತಿದ್ದಾರೆ.

ಆದರೆ ಮೂಲಗಳಿಂದ ಪಡೆದ ಮಾಹಿತಿ ಪ್ರಕಾರ ಪ್ರಶಾಂತ್ ನೀಲ್ ಉಗ್ರಾಂ ಕಥೆಯನ್ನು ಸಂಪೂರ್ಣ ಬದಲಾಯಿಸಿ ಪ್ರಭಾಸ್ ಶ್ರೇಣಿಗೆ ತಕ್ಕಂತೆ ಬೃಹತ್ ಆಕ್ಷನ್ ದೃಶ್ಯಗಳೊಂದಿಗೆ ಅದನ್ನು ಪ್ರದರ್ಶಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ