ಹೈದರಾಬಾದ್ : ಕೊರೊನಾ 2ನೇ ಅಲೆ ಹೊಡೆತ ಜೋರಾಗಿದ್ದು, ಈಗಾಗಲೇ ಹಲವು ರಾಜಕಾರಣಿಗಳು, ಸಿನಿಮಾ ತಾರೆಯರು ಇದರ ಹೊಡೆತಕ್ಕೆ ಸಿಲುಕಿದ್ದಾರೆ. ಇದೀಗ ಟಾಲಿವುಡ್ ನಟ ಪ್ರಭಾಸ್ ಅವರು ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗಿದ್ದಾರೆ.
ಹೌದು. ಪ್ರಭಾಸ್ ಅವರ ಮೇಕಪ್ ಮ್ಯಾನ್ ಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಭಾಸ್ ಹೋಂ ಕ್ವಾರಂಟೈನ್ ಆಗಿದ್ದಾರೆ.
ಪ್ರಸ್ತುತ ಅವರು ಆದಿಪುರುಷ, ಸಲಾರ್ ಮತ್ತು ರಾಧೆಶ್ಯಾಮ್ ಮೂರು ಚಿತ್ರಗಳ ಶೂಟಿಂಗ್ ಮಾಡುತ್ತಿದ್ದರು. ಈಗ ಅವರು ಕ್ವಾರಂಟೈನ್ ಆದ ಹಿನ್ನಲೆಯಲ್ಲಿ ಈ ಚಿತ್ರಗಳ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.