100 ಕೋಟಿ ವಂಚನೆ ಪ್ರಕರಣ: ಪ್ರಕಾಶ್ ರಾಜ್ ಗೆ ಇಡಿ ನೋಟಿಸ್

ಶುಕ್ರವಾರ, 24 ನವೆಂಬರ್ 2023 (11:08 IST)
ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಗೆ 100 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.

ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲ್ಲರ್ಸ್ ಗೆ ಪ್ರಕಾಶ್ ರಾಜ್ ರಾಯಭಾರಿಯಾಗಿದ್ದರು. ಆದರೆ ಈ ಸಂಸ್ಥೆ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಈ ಜ್ಯುವೆಲ್ಲರ್ಸ್ ಶಾಖೆಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು.

ಈ ಸಂಸ್ಥೆಯ ರಾಯಭಾರಿಯಾಗಿದ್ದರೂ ಪ್ರಕಾಶ್ ರಾಜ್ ಸಂಸ್ಥೆಯ ಹಗರಣದ ಬಗ್ಗೆ ಮೌನವಾಗಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ನೋಟಿಸ್ ನೀಡಿದೆ. ಆಭರಣ ಅಂಗಡಿ ಮಾಲಿಕರು ಮತ್ತು ಪತ್ನಿಗೂ ಲುಕ್ ಔಟ್ ನೋಟಿಸ್ ನೋಟಿಸ್ ಜಾರಿ ಮಾಡಿದೆ.

ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ನಂಬಿಸಿ ಹೂಡಿಕೆದಾರರಿಂದ 100 ಕೋಟಿ ರೂ. ಸಂಗ್ರಹಿಸಿದೆ. ಆದರೆ ಲಾಭವೂ ಇಲ್ಲ, ಹಣವೂ ಇಲ್ಲ ಎಂದಾಗಿತ್ತು.  ಈ ಪ್ರಕರಣ ಈಗ ನಟ ಪ್ರಕಾಶ್ ರಾಜ್ ಗೂ ಸಂಕಷ್ಟ ತಂದೊಡ್ಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ