ಪ್ರಕಾಶ್ ರಾಜ್ ಅರೆಸ್ಟ್ ಮಾಡಿ! ಟ್ರೆಂಡ್ ಶುರು!

ಗುರುವಾರ, 24 ಆಗಸ್ಟ್ 2023 (09:20 IST)
ಬೆಂಗಳೂರು: ಚಂದ್ರಯಾನ 3 ಬಗ್ಗೆ ಜೋಕ್ ಮಾಡಿ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್ ರನ್ನು ಅರೆಸ್ಟ್ ಮಾಡಬೇಕು ಎಂದು ಟ್ವಿಟರಿಗರು ಟ್ರೆಂಡ್ ಶುರು ಮಾಡಿದ್ದಾರೆ.

 ನಿನ್ನೆ ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಕೆಲವು ಟ್ವಿಟರ್ ಬಳಕೆದಾರರು ಪ್ರಕಾಶ್ ರಾಜ್ ರನ್ನು ಅರೆಸ್ಟ್ ಮಾಡಿ ಎಂದು ಅಭಿಯಾನ ಶುರು ಮಾಡಿದ್ದರು.

ಇತ್ತ ಚಂದ್ರಯಾನ 3 ಯಶಸ್ವಿಯಾಗುತ್ತಿದ್ದಂತೇ ಟ್ವೀಟ್ ಮಾಡಿದ್ದ ಪ್ರಕಾಶ್ ರಾಜ್ ಇಸ್ರೋ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದರಲ್ಲದೆ, ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದರು. ಆದರೆ ಈ ಟ್ವೀಟ್ ಗೂ ಹಲವು ನೆಟ್ಟಿಗರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ