ರಂಜಾನ್ ಹಬ್ಬಕ್ಕೆ ಬಡಮುಸ್ಲಿಮನಿಗೆ ಮನೆ ಉಡುಗೊರೆಯಾಗಿ ನೀಡಿದ ಪ್ರಕಾಶ್ ರೈ

ಮಂಗಳವಾರ, 27 ಜೂನ್ 2017 (20:32 IST)
ರಮ್‌ಜಾನ್ ಹಬ್ಬದ ಅಂಗವಾಗಿ ತೆಲಂಗಾಣದಲ್ಲಿ ಬಡ ಮುಸ್ಲಿಂ ಕುಟುಂಬಕ್ಕೆ ನಟ ಪ್ರಕಾಶ್ ರೈ ಮನೆಯೊಂದನ್ನು ಉಡುಗೊರೆಯಾಗಿ ನೀಡಿ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. 
 
ಸಿನೆಮಾಗಳ ಪ್ರತಿಯೊಂದು ಪಾತ್ರಕ್ಕೆ ಜೀವ ತುಂಬುವ ಸಾಮರ್ಥ್ಯಹೊಂದಿರುವ ನಟ ರೈ, ಮೆಹಬೂಬ್‌ನಗರ್ ಜಿಲ್ಲೆಯ ಕೊಂಡಾರೆಡ್ಡಿಪಲ್ಲಿ ಗ್ರಾಮದಲ್ಲಿ ಬಡಮುಸ್ಲಿಮನಾದ ಛೋಟೆ ಮಿಯಾ ಕುಟುಂಬಕ್ಕೆ ಮನೆ ಉಡುಗೊರೆಯಾಗಿ ನೀಡಿ ರಿಯಲ್ ಹೀರೋ ಆಗಿ ಮೆರಿದಿದ್ದಾರೆ.   
 
ಪ್ರಕಾಶ್ ರೈ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಮನೆಯನ್ನು ಛೋಟೆ ಮಿಯಾ ಕುಟುಂಬಕ್ಕೆ ನೀಡಿ ಸಂಭ್ರಮದ ರಮ್‌ಜಾನ್ ಆಚರಿಸಿದರು. ಕಳೆದ ಕೆಲ ತಿಂಗಳುಗಳ ಹಿಂದೆ ರೈ, ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.
 
ಛೋಟೆ ಮಿಯಾ, ಅವರ ಪತ್ನಿ ಮತ್ತು ಮೂವರು ಪುತ್ರಿಯರು ಮೊದಲಿಗೆ ಒಂದು ಶಿಥಿಲವಾದ ಸ್ಥಿತಿಯಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದರು. ಇದೀಗ ಪ್ರಕಾಶ್ ರಾಜ್ ಫೌಂಡೇಷನ್ ಬಡ ಕುಟುಂಬಕ್ಕೆ ಹೊಸ ಮನೆಯನ್ನು ನಿರ್ಮಿಸಿದೆ. 
 
ಈದ್ ಸಂದರ್ಭದಲ್ಲಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ನಟ ಟ್ವಿಟ್ಟರ್‌ನಲ್ಲಿ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
 
ಔಪಚಾರಿಕವಾಗಿ ಮನೆಯನ್ನು ಉದ್ಘಾಟಿಸಲು ಪ್ರಕಾಶ್ ರೈ ರಿಬ್ಬನ್ ಕತ್ತರಿಸುವುದು ಕಂಡುಬಂದಿದೆ. ಅವರು ಹಳ್ಳಿಗರೊಂದಿಗೆ ಸಂವಹನ ನಡೆಸುತ್ತಿದ್ದರು. ಅವರು ಹೊಸದಾಗಿ ನಿರ್ಮಿಸಿದ ಮನೆಯ ಮುಂದೆ ನಿಂತಿರುವ ಮುಸ್ಲಿಂ ಕುಟುಂಬದ ಚಿತ್ರವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ