ರಾಜಕೀಯದಿಂದಾಗಿ ನನ್ನನ್ನು ಚಿತ್ರರಂಗದವರು ಹತ್ತಿರ ಸೇರಿಸುತ್ತಿಲ್ಲ: ಪ್ರಕಾಶ್ ರೈ

ಬುಧವಾರ, 16 ನವೆಂಬರ್ 2022 (08:40 IST)
ಚೆನ್ನೈ: ನಟ ಪ್ರಕಾಶ್ ರೈ ರಾಜಕೀಯ ಕಾರಣದಿಂದ ಈಗ ತಮ್ಮನ್ನು ಚಿತ್ರರಂಗದ ದೂರವಿಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಕಾಶ್ ರೈ ಎಡಪಂಥೀಯ ರಾಜಕೀಯ ನಿಲುವು ಹೊಂದಿದ್ದು, ಪ್ರಧಾನಿ ಮೋದಿ ಸಹಿತ ಬಲಪಂಥೀಯ ನಾಯಕರ ವಿರುದ್ಧ ಕಿಡಿ ಕಾರುತ್ತಲೇ ಇರುತ್ತಾರೆ. ಇದು ಅವರ ವೃತ್ತಿ ಜೀವನದದ ಮೇಲೆ ಪರಿಣಾಮ ಬೀರಿದೆಯಂತೆ.

‘ರಾಜಕೀಯ ನಿಲುವುಗಳಿಂದಾಗಿ ನನ್ನನ್ನು ಕೆಲವರು ಚಿತ್ರರಂಗದಿಂದ ದೂರವಿಟ್ಟಿದ್ದಾರೆ. ನನ್ನ ಜೊತೆ ಕೆಲಸ ಮಾಡಿದರೆ ಜನ ಒಪ್ಪದೇ ಇದ್ದರೆ ಎಂಬುದು ಅವರ ಭಯ. ನಾನು ಅಂತಹ ಆಫರ್ ಗಳನ್ನು ಬಿಡುವಷ್ಟು ಶ್ರೀಮಂತನಾಗಿದ್ದೇನೆ. ನನ್ನ ಭಯವೇ ಮತ್ತೊಬ್ಬರಿಗೆ ಶಕ್ತಿಯಾಗಬಹುದು’ ಎಂದು ಪ್ರಕಾಶ್ ರೈ ಹೇಳಿಕೊಂಡಿದ್ದಾರೆ. ಹಾಗಂತ ಟೀಕೆಯನ್ನು ನಿಲ್ಲಿಸುವುದಿಲ್ಲ. ಮುಂದುವರಿಸುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ