ಗಂಧದ ಗುಡಿ ಟಿಕೆಟ್ ದರದಲ್ಲಿ ವಿನಾಯ್ತಿ: ಬಂಪರ್ ಆಫರ್ ಕೊಟ್ಟ ಅಶ್ವಿನಿ ಪುನೀತ್

ಸೋಮವಾರ, 7 ನವೆಂಬರ್ 2022 (09:03 IST)
Photo Courtesy: Twitter
ಬೆಂಗಳೂರು: ಪುನೀತ್ ರಾಜ್ ಕುಮಾರ್ ಕರ್ನಾಟಕದ ವನಸಂಪತ್ತಿನ ಕುರಿತಾಗಿ ಚಿತ್ರಣ ಕೊಟ್ಟಿರುವ ಗಂಧದ ಗುಡಿ ಸಾಕ್ಷ್ಯಚಿತ್ರ ಇಂದಿನಿಂದ ರಿಯಾಯ್ತಿ ದರದಲ್ಲಿ ಥಿಯೇಟರ್ ನಲ್ಲಿ ಪ್ರದರ್ಶನವಾಗಲಿದೆ.

ಇಂದಿನಿಂದ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ಸಿಂಗಲ್ ಸ್ಟ್ರೀನ್ ಗಳಲ್ಲಿ 56 ರೂ. ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 112 ರೂ.ಗೆ ಟಿಕೆಟ್ ಮಾರಾಟವಾಗಲಿದೆ.

ಪರಿಸರ ಕುರಿತ ಕಾಳಜಿ ಬಗ್ಗೆ ಸಂದೇಶ ಕೊಡುವ ಚಿತ್ರವಾಗಿರುವುದರಿಂದ ಇದು ಹೆಚ್ಚು ಜನಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ನಿರ್ಮಾಪಕಿ ಅಶ್ವಿನಿ ಪುನೀತ್ ಇಂತಹದ್ದೊಂದು ಘೋಷಣೆ ಮಾಡಿದ್ದಾರೆ. ಅಲ್ಲದೆ ಇದು ಪುನೀತ್ ಕನಸಿನ ಪ್ರಾಜೆಕ್ಟ್ ಆಗಿತ್ತು. ಹೀಗಾಗಿ ಈ ಆಫರ್ ನೀಡಲಾಗಿದೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ