ಕುತೂಹಲ ಮೂಡಿಸಿದ ರಾಕಿಂಗ್ ಸ್ಟಾರ್ ಯಶ್ ಹಾಲಿವುಡ್ ಲುಕ್!
ಕೆಜಿಎಫ್ 2 ಬಳಿಕ ಯಶ್ ಯಾವುದೇ ಹೊಸ ಸಿನಿಮಾ ಘೋಷಿಸಿರಲಿಲ್ಲ. ಆದರೆ ಇತ್ತೀಚೆಗೆ ರೇಸ್, ಶೂಟಿಂಗ್ ತರಬೇತಿ ಪಡೆಯುತ್ತಿದ್ದರು. ಇದೀಗ ಕೆಜಿಎಫ್ ನಲ್ಲಿದ್ದಂತೇ ಉದ್ದ ಕೂದಲು ದಾಡಿ ಬಿಟ್ಟುಕೊಂಡಿರುವ ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಪದೇ ಪದೇ ಅವರು ಮುಂಬೈಗೆ ಬಂದು ಹೋಗುತ್ತಿರುವುದು ಗಮನಿಸಿದರೆ ಯಶ್ ಮುಂದಿನ ಸಿನಿಮಾ ಬಾಲಿವುಡ್ ನಲ್ಲಿರಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.