ಜೂನಿಯರ್ ಎನ್ ಟಿಆರ್ ಜೊತೆ ಚಿತ್ರ ಘೋಷಿಸಿದ ಪ್ರಶಾಂತ್ ನೀಲ್
ಭಾನುವಾರ, 23 ಮೇ 2021 (09:34 IST)
ಹೈದರಾಬಾದ್ : ಈಗಾಗಲೇ ಟಾಲಿವುಡ್ ನಟ ಪ್ರಭಾಸ್ ಅವರೊಂದಿಗೆ ಸಲಾರ್ ಚಿತ್ರ ಮಾಡುತ್ತಿರುವ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ಮತ್ತೊಬ್ಬ ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್ ಜೊತೆ ಚಿತ್ರ ಮಾಡಲು ಹೊರಟಿದ್ದಾರೆ.
ಈಗಾಗಲೇ ಜೂನಿಯರ್ ಎನ್ ಟಿಆರ್ ಜನ್ಮದಿನದಂದು ಪ್ರಶಾಂತ್ ನೀಲ್ ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜೂನಿಯರ್ ಎನ್ ಟಿಆರ್ ಜೊತೆ ತಮ್ಮ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಅವರು ನಿರ್ಮಾಣ ಮಾಡಲಿದೆ. ಈ ಬಗ್ಗೆ ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಸಂತಸಗೊಂಡಿದ್ದಾರೆ ಎನ್ನಲಾಗಿದೆ.