ಕೊರೋನಾ ಹೋರಾಟಕ್ಕೆ ಸನ್ ರೈಸರ್ಸ್ ಫ್ರಾಂಚೈಸಿಯ ಭರ್ಜರಿ ಕೊಡುಗೆ

ಮಂಗಳವಾರ, 11 ಮೇ 2021 (10:08 IST)
ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ಭಾರತದ ಕೊರೋನಾ ಹೋರಾಟಕ್ಕೆ ಭರ್ಜರಿ ದೇಣಿಗೆ ನೀಡುವ ಮೂಲಕ ಸುದ್ದಿಯಾಗಿದೆ.


ಐಪಿಎಲ್ ನ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊರೋನಾ ವಿರುದ್ಧದ ಹೋರಾಟಕ್ಕೆ ಬರೋಬ್ಬರಿ 30 ಕೋಟಿ ರೂ. ದೇಣಿಗೆ ನೀಡಲಿದೆ. ಇದಲ್ಲದೆ ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಅಗತ್ಯ ಪರಿಕರಗಳನ್ನೂ ಒದಗಿಸಲಿದೆ.

ಈ ಮೊದಲು ಐಪಿಎಲ್ 14 ಚಾಲ್ತಿಯಲ್ಲಿರುವಾಗ ಹೈದರಾಬಾದ್ ತಂಡ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು. ಇದೀಗ ದೊಡ್ಡ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು, ಎನ್ ಜಿಒಗಳಿಗೆ ವಿತರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ